
ರಾಮದುರ್ಗ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕಡಿಮೆ ಇರುವ ಪ್ರದೇಶಗಳಿಗೆ ನೀರು ಪೂರೈಸುವುದೇ ಈ ಎರಡೂ ಯೋಜನೆಗಳ ಉದ್ದೇಶವಾಗಿದೆ. ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಕರ್ತವ್ಯಲೋಪದಿಂದ ಬಹುನಿರೀಕ್ಷಿತ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ. ಹೋರಾಟವೇ ನಮ್ಮ ಮುಂದಿನ ಮಾರ್ಗ.
ಜಗದೀಶ ದೇವರಡ್ಡಿ, ಅಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕ
ಇವರೇನಂತಾರೆ..? ನಿರೀಕ್ಷೆಯಲ್ಲಿದ್ದೇವೆ ನೀರು ಬರುವುದೆಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದೇ. ನೀರಾವರಿ ಅನುಷ್ಠಾನವಾದರೆ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಲಿದೆ. ಇಂದುಮತಿ ಬುಡ್ಡಾಗೋಳ ರೈತ ಮಹಿಳೆ ಆರಂಭ ಶೂರತ್ವ ತೋರಿದ ಶಾಸಕ’ ಏತ ನೀರಾವರಿ ಯೋಜನೆಗೆ ಮುಂಚೆ ಇದ್ದ ಇಚ್ಛಾಶಕ್ತಿ ಮೂರನೇ ಬಾರಿಗೆ ಚುನಾಯಿತ ಶಾಸಕ ಅಶೋಕ ಪಟ್ಟಣ ಅವರಿಗೆ ಈಗ ಇಲ್ಲ. ಅವರು ಕೇವಲ ಆರಂಭ ಶೂರತ್ವ ತೋರಿದರೇ ವಿನಃ ರೈತರ ಬಗ್ಗೆ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಏತ ನೀರಾವರಿಗಳು ಇನ್ನೂ ನನೆಗುದಿಗೆ ಬಿದ್ದಿವೆ.
ಮಲ್ಲಣ್ಣ ಯಾದವಾಡ, ಅಧ್ಯಕ್ಷ, ಧನಲಕ್ಷ್ಮಿ ಸಹಕಾರ ಸಕ್ಕರೆ ಕಾರ್ಖಾನೆ
ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಕಾಮಗಾರಿಯೂ ಶೀಘ್ರ ಪೂರ್ಣಗೊಳ್ಳಲಿದೆ.
ಎಸ್.ಎಂ. ಬಾಲದಾರ, ಕಾರ್ಯನಿರ್ವಾಹಕ ಎಂಜಿನಿಯರ್, ಎಂಎಲ್ಬಿಸಿಸಿರಾಮದುರ್ಗ ತಾಲ್ಲೂಕಿನ ಕಾಲುವೆಯಲ್ಲಿ ಗಿಡಗಂಟಿ ಬೆಳೆದಿದೆ
ರಾಮದುರ್ಗ ತಾಲ್ಲೂಕಿನಲ್ಲಿ ನೀರು ಸಂಗ್ರಹಿಟ್ಟುಕೊಳ್ಳುವ ಗೇಟುಗಳು ತುಕ್ಕು ಹಿಡಿದಿವೆ
ರಾಮದುರ್ಗ ತಾಲ್ಲೂಕಿನಲ್ಲಿ ಮುಚ್ಚಿ ಹೋಗಿರುವ ಸಿಮೆಂಟ್ ಕಾಲುವೆಗಳು