ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಧನೆ ನೋಡಲು ಬಂದ ಪೋಷಕರಿಗೆ ನಿರಾಸೆ

Last Updated 5 ಅಕ್ಟೋಬರ್ 2020, 13:48 IST
ಅಕ್ಷರ ಗಾತ್ರ

ಬೆಳಗಾವಿ: ತಮ್ಮ ಮಕ್ಕಳು ಚಿನ್ನದ ಪದಕ ಪಡೆಯುವುದನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ವಿವಿಧೆಡೆಯಿಂದ ಮತ್ತುವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಂದ ಬಂದಿದ್ದ ಪೋಷಕರು ನಿರಾಸೆ ಅನುಭವಿಸಿದ ಘಟನೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಆಯೋಜಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ನಡೆಯಿತು.

ಕೋವಿಡ್–19 ಕಾರಣದಿಂದ, ಸಮಾರಂಭ ಆಯೋಜಿಸಿದ್ದ ಸಭಾಂಗಣದಲ್ಲಿ 100 ಮಂದಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿತ್ತು. ಮಾಧ್ಯಮದವರು, ಪೋಷಕರು ಮೊದಲಾದವರಿಗೆ ಸೆಂಟ್ರಲ್ ಹಾಲ್‌ನಲ್ಲಿ ದೊಡ್ಡ ಪರದೆ ಅಳವಡಿಸಿ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಘಟಿಕೋತ್ಸವದ ಪ್ರಮುಖ ಘಟ್ಟವಾದ ಘಟಿಕೋತ್ಸವ ಭಾಷಣ, ಪದವಿ, ಚಿನ್ನದಪದಕಗಳ ಪ್ರದಾನ ಸಂದರ್ಭದಲ್ಲಿ ತಾಂತ್ರಿಕ ಕಾರಣದಿಂದಾಗಿ ನೇರಪ್ರಸಾರದಲ್ಲಿ ಅಡಚಣೆ ಉಂಟಾಯಿತು. ಅರ್ಧಂಬರ್ಧ ಮೂಡುತ್ತಿದ್ದ ದೃಶ್ಯಗಳು, ಸಭಾಂಗಣದಲ್ಲಿದ್ದವರಿಗೆ ಕಿರಿಕಿರಿ ಉಂಟು ಮಾಡಿತು.

ಸಮಸ್ಯೆ ಪರಿಹಾರಕ್ಕೆ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಗಮನಹರಿಸಲೇ ಇಲ್ಲ! ಇದು ಪೋಷಕರ ಅಸಮಾಧಾನಕ್ಕೆ ಕಾರಣವಾಯಿತು. ‘ಇದು ವಿಶ್ವವಿದ್ಯಾಲಯದವರ ಬೇವಾಬ್ದಾರಿ’ ಎಂದು ಖಂಡಿಸಿದರು.

ಈ ವೇಳೆ ಮೊದಲ ರ‍್ಯಾಂಕ್‌ ಪಡೆದ ಸೃಷ್ಟಿ ಗ್ಯಾನಿ ಅವರ ಪೋಷಕ ಗುರು ಅಮರೇಂದ್ರ ರೆಡ್ಡಿ ಪುತ್ರಿ ಚಿನ್ನದ ಪದಕ ಪಡೆಯುವ ದೃಶ್ಯ ನೋಡಲಾಗದಿದ್ದಕ್ಕೆ ಭಾವುಕರಾದರು. ‘ಸಮಾರಂಭವನ್ನು ನೇರವಾಗಿ ವೀಕ್ಷಿಸಲು ಅವಕಾಶ ಸಿಗಲಿಲ್ಲ. ಇಲ್ಲಿ ನೇರಪ್ರಸಾರವೂ ಬರಲಿಲ್ಲ. ಜೀವನದಲ್ಲಿ ಸಿಗುವ ಅತ್ಯಂತ ಮಹತ್ವದ ಕ್ಷಣಗಳಿವು. ಅದನ್ನು ನೋಡಲಾಗಲಿಲ್ಲ. ಇದರಿಂದ ಬಹಳ ಬೇಸರವಾಯಿತು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT