ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ಶಾರನ್ನು ರಾಜ್ಯದೊಳಗೆ ಬಿಡಬೇಡಿ: ಸುರ್ಜೆವಾಲಾ

Published 25 ಏಪ್ರಿಲ್ 2024, 16:13 IST
Last Updated 25 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ಬೆಳಗಾವಿ: ‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್‌ ಶಾ ಅವರು ರಾಜ್ಯದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರಿಗೆ ಅನ್ಯಾಯ ಮಾಡಿದ ಅವರು, ಚುನಾವಣಾ ಪ್ರವಾಸಕ್ಕೆ ಬರುವ ಅರ್ಹತೆ ಹೊಂದಿಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯದ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಹೇಳಿದರು.

ನಗರದಲ್ಲಿ ಗುರುವಾರ ಚೊಂಬು ಹಿಡಿದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಈಸ್ಟ್‌ ಇಂಡಿಯಾ ಕಂಪನಿ ಇದ್ದಂತೆ. ದೇಶವನ್ನು ಒಡೆದಾಳುವಲ್ಲಿ ಇವರು ಸಿದ್ಧಹಸ್ತರು. ಆರೂವರೆ ಕೋಟಿ ಕನ್ನಡಿಗರ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ಇವರನ್ನು ರಾಜ್ಯದೊಳಗೆ ಬಿಡಬಾರದು’ ಎಂದರು.

‘ಈವರೆಗಿನ ಬಿಜೆಪಿ ಆಡಳಿತ ಟ್ರೇಲರ್‌ ಮಾತ್ರ; ಪಿಕ್ಚರ್‌ ಇನ್ನೂ ಬಾಕಿ ಇದೆ’ ಎಂಬ ಮೋದಿ ಮಾತಿಗೆ ತಿರುಗೇಟು ನೀಡಿದ ಅವರು, ‘ಇವರದು ಟ್ರೇಲರ್‌ನಲ್ಲೇ ಪ್ಲಾಫ್‌ ಆಗಿದೆ. ಕ್ಯಾಮೆರಾಮನ್‌, ನಿರ್ದೇಶಕ, ನಿರ್ಮಾಪಕ ಓಡಿಹೋಗಿದ್ದಾರೆ. ಹೀರೋ ಅಂತೂ ಇಲ್ಲವೇ ಇಲ್ಲ. ‘ವಿಲನ್‌’ ಒಬ್ಬನೇ ಇದ್ದಾನೆ’ ಎಂದೂ ಅವರು ಪರೋಕ್ಷವಾಗಿ ಮೋದಿಯನ್ನು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT