ರಾಯಬಾಗ(ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಿಡಗುಂದಿ ಮತ್ತು ಸವಸುದ್ದಿ ಗ್ರಾಮಗಳ ಇಬ್ಬರು ಶಿಕ್ಷಕರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಒಂದೇ ವಾರದಲ್ಲಿ ಪೂರ್ಣಗೊಳಿಸಿದ್ದಾರೆ.

ನಿಡಗುಂದಿಯ ಸಿದ್ಧೇಶ್ವರ ನಗರದ ಸರ್ಕಾರಿ ಶಾಲೆಯ ಶೋಭಾ ಕೋಳಿ ಅವರು 79 ಮತ್ತು ಸವಸುದ್ದಿಯ ಸನದಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮರ ಪೂಜೇರಿ 77 ಕುಟುಂಬಗಳ ಸಮೀಕ್ಷೆ ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

‘ಹಲವು ತೊಡಕುಗಳನ್ನು ಇಬ್ಬರೂ ಶಿಕ್ಷಕರು ಸಮರ್ಥವಾಗಿ ಎದುರಿಸಿ ಸಮೀಕ್ಷೆ ಪೂರ್ಣಗೊಳಿಸಿ, ಇತರೆ ಶಿಕ್ಷಕರಿಗೆ ಮಾದರಿಯಾಗಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್. ತಿಳಿಸಿದರು.

‘ನಾನು ನಸುಕಿನ 6 ರಿಂದ ರಾತ್ರಿ 9.30ರವರೆಗೆ ಸಮೀಕ್ಷೆ ಮಾಡುತ್ತಿದ್ದೆ. ಬೇಗ ಸಮೀಕ್ಷೆ ಆರಂಭಿಸುತ್ತಿದ್ದ ಕಾರಣ, ನೆಟ್ವರ್ಕ್ ಸಮಸ್ಯೆ ಅಷ್ಟಾಗಿ ಕಾಡಲಿಲ್ಲ’ ಎಂದು ಶೋಭಾ ಕೋಳಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.