ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಶಕ್ತ ರಾಷ್ಟ್ರ: ಶಿಕ್ಷಕರ ಪಾತ್ರ ದೊಡ್ಡದು

ಚಿಕ್ಕೋಡಿಯಲ್ಲಿ ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ
Last Updated 5 ಸೆಪ್ಟೆಂಬರ್ 2021, 14:05 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಸಶಕ್ತ ರಾಷ್ಟ್ರ ನಿರ್ಮಾಣವಾಗಲು ಶಿಕ್ಷಕರ ಪಾತ್ರ ದೊಡ್ಡದಿದೆ. ಆಧುನಿಕ ತಂತ್ರಜ್ಞಾನ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವುದು ಅವಶ್ಯವಾಗಿದೆ’ ಎಂದು ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಹೇಳಿದರು.

ಇಲ್ಲಿನ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಣ ಇಲಾಖೆ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಕುರಿತು ಶಿಕ್ಷಕರು ಅಧ್ಯಯನ ಕೈಗೊಂಡು ಮಕ್ಕಳಿಗೆ ತಿಳಿಸುವುದು ಸೂಕ್ತವಾಗಿದೆ’ ಎಂದರು.

‘ಶಿಕ್ಷಣವಿಲ್ಲದ ಮನುಷ್ಯ ಮೃಗವಾಗುತ್ತಾನೆ. ಹಣ–ಅಂತಸ್ತು ಇದ್ದವರಕ್ಕಿಂತ ಶಿಕ್ಷಣ ಪಡೆದ ವ್ಯಕ್ತಿ ಈ ದೇಶದ ಶ್ರೀಮಂತವಾಗುತ್ತಾನೆ. ಮಕ್ಕಳನ್ನು ದೇಶದ ಒಳ್ಳೆಯ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ ಮಾತನಾಡಿ, ‘ಮಕ್ಕಳು ಶಿಸ್ತು, ಸಂಸ್ಕಾರ ಅಳವಡಿಸಿಕೊಳ್ಳುವುದು ಶಿಕ್ಷಕರಿಂದ ಮಾತ್ರ. ಹೀಗಾಗಿ ಅವರು ಶಿಸ್ತು ಮತ್ತು ಹಿರಿಯರಿಗೆ ಗೌರವ ಕೊಡುವ ಪದ್ಧತಿಯನ್ನು ಮಕ್ಕಳಿಗೆ ಕಲಿಸುವುದು ಸೂಕ್ತವಾಗಿದೆ’ ಎಂದು ತಿಳಿಸಿದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಗಜಾನನ ಮನ್ನಿಕೇರಿ ಮಾತನಾಡಿ, ‘ ಎರಡು ವರ್ಷದಿಂದ ಕೋವಿಡ್ ಕಾರಣದಿಂದ ಶಾಲೆಗಳು ಬಂದ್ ಇದ್ದರೂ ಶಿಕ್ಷಕರು ಆನಲೈನ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ಇಡೀ ರಾಜ್ಯದಲ್ಲಿ ಮಾದರಿಯಾಗಿದೆ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಪಾರ ಸಾಧನೆ ಮಾಡಲು ಶಿಕ್ಷಕರ ಪರಿಶ್ರಮವೇ ಕಾರಣವಾಗಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರಿಗೆ ಪ್ರಶಸ್ತಿ ನೀಡಲಾಯಿತು.

ಡಯಟ್ ಪ್ರಾಚಾರ್ಯ ಮೋಹನ ಜಿರಗಿಹಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ. ಮೇಕನಮರಡಿ, ಶಿಕ್ಷಣಾಧಿಕಾರಿ ಎ.ಸಿ. ಗಂಗಾಧರಪ್ಪ, ಎಸ್.ಎನ್. ಬೆಳಗಾವಿ, ಎಸ್.ಎಂ. ಲೋಕನ್ನವರ, ಅಲಗೌಡ ಸೊಲ್ಲಾಪೂರೆ, ಸಿದ್ದು ಬಬಲೇಶ್ವರ, ಎನ್.ಜಿ. ಪಾಟೀಲ, ಜಿ.ಎಂ. ಕಾಂಬಳೆ, ವೈ.ಎಸ್. ಬುಡ್ಡಗೋಳ, ಎಂ.ಎಂ. ಅಳಗುಂಡಿ, ಎಸ್.ಎ. ಖಡ್ಡ ಇದ್ದರು.

ಶಿಕ್ಷಕ ಚಂದ್ರಶೇಖರ ಅರಭಾವಿ ಮತ್ತು ಎಸ್.ಎಸ್. ಧೂಪದಾಳೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT