ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಕಾರ್ಯಕರ್ತೆಯರನ್ನು ಗೌರವಿಸಬೇಕು: ವೀರೇಶ್ವರ ದೇವರು

Last Updated 17 ಮೇ 2020, 9:27 IST
ಅಕ್ಷರ ಗಾತ್ರ

ತೆಲಸಂಗ: ‘ಕೊರೊನಾ ಸಂಕಷ್ಟದ ಸಮಯದಲ್ಲಿ ಆಯಾ ಗ್ರಾಮಗಳಲ್ಲಿನ ಪ್ರತಿ ಅಂಕಿ–ಅಂಶವನ್ನು ಸರ್ಕಾರಕ್ಕೆ ನೀಡಿದ ಆಶಾ ಕಾರ್ಯಕರ್ತೆಯರನ್ನು ಗೌರವಿಸಬೇಕು. ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸರ್ಕಾರ ಮುಂದಾಗಬೇಕು’ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.

ಗ್ರಾಮದ ಪಂ.ಪುಟ್ಟರಾಜ ಕವಿ ಪಂಚಾಕ್ಷರಿ ಗವಾಯಿಗಳ ಕಲಾ ಸಂಘ ಮತ್ತು ವಿಶ್ವಚೇತನ ವಿದ್ಯಾಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಿದ್ದ ಕೊರೊನಾ ಸೈನಿಕರಿಗೆ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೊರೊನಾ ಸೈನಿಕರ ಸೇವೆಗೆ ಬೆಲೆ ಕಟ್ಟಲಾಗದು. ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಡಿಮೆ ಸಂಬಳಕ್ಕೆ ಹಗಲು, ರಾತ್ರಿ ಎನ್ನದೆ ನರ್ಸ್‍ಗಳು ದುಡಿಯುತ್ತಿದ್ದಾರೆ. ಜೀವದ ಹಂಗು ತೊರೆದು ಜನ ಸೇವೆಯಲ್ಲಿ ನಿರತರಾದ ಲಕ್ಷಾಂತರ ನರ್ಸ್‍ಗಳನ್ನು ಕಾಯಂಗೊಳಿಸಲು ಹಾಗೂ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವ ಮೂಲಕ ಸರ್ಕಾರ ನಿಜವಾದ ಗೌರವ ಸಲ್ಲಿಸಬೇಕು’ ಎಂದರು.

ಮುಖಂಡರಾದ ಡಾ.ಎಸ್.ಐ. ಇಂಚಗೇರಿ, ಡಾ.ಬಿ.ಎಸ್. ಕಾಮನ್, ಅಮೋಘ ಖೊಬ್ರಿ ಮಾತನಾಡಿದರು.

ವಿವಿಧ ಇಲಾಖೆಗಳ 70 ಕೊರೊನಾ ಸೈನಿಕರನ್ನು ಹೂಮಳೆ ಮೂಲಕ ಸತ್ಕರಿಸಲಾಯಿತು. ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಇಒ ರವಿ ಬಂಗಾರೆಪ್ಪನವರ, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಐ.ಎನ್. ಇಂಚಗೇರಿ, ಪಿಎಸ್‍ಐ ಕೆ.ಎಸ್. ಕೊಚರಿ, ಹೆಸ್ಕಾಂ ಎಇಇ ಎನ್.ಜಿ. ಬೀಳಗೀಕರ, ಡಾ.ವಾಸಂತಿ, ಗ್ರಾಮ ಲೆಕ್ಕಾಧಿಕಾರಿ ಬಿ.ಜಿ. ಇರಕರ್, ಪಿಡಿಒ ಬೀರಪ್ಪ ಕಡಗಂಚಿ, ಪ್ರಕಾಶ ಸಿಂದಗಿ, ಅಶೋಕ ಪರುಶೆಟ್ಟಿ, ಮಾದೇವ ಸಕ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT