ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಸಂಗ: ಯಲ್ಲಮ್ಮದೇವಿ ಜಾತ್ರೆ ರದ್ದು

Last Updated 24 ನವೆಂಬರ್ 2020, 17:08 IST
ಅಕ್ಷರ ಗಾತ್ರ

ತೆಲಸಂಗ: ‘ಇಲ್ಲಿ ನ. 30ರಿಂದ 3ದಿನ ನಡೆಯಬೇಕಿದ್ದ ಯಲ್ಲಮ್ಮದೇವಿ ಜಾತ್ರೆಯನ್ನುಕೋವಿಡ್–19 ಕಾರಣದಿಂದ ರದ್ದುಪಡಿಸಲಾಗಿದೆ. ಸೂಚನೆ ಮೀರಿ ಜಾತ್ರೆ ನಡೆಸಿದರೆ ಅಥವಾ ದೇವಿ ದರ್ಶನಕ್ಕೆ ಬಂದರೆ ಪ್ರಕರಣ ದಾಖಲಿಸಲಾಗುವುದು’ ಎಂದು ಉಪ ತಹಶೀಲ್ದಾರ್ ಎಂ.ಎಸ್. ಯತ್ನಟ್ಟಿ ತಾಕೀತು ಮಾಡಿದರು.

ಇಲ್ಲಿನ ನಾಡ ಕಚೇರಿಯಲ್ಲಿ ಮಂಗಳವಾರ ಜಾತ್ರಾ ಸಮಿತಿಯವರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ವಾಡಿಕೆಯಿಂದ ನಡೆದು ಬಂದ ಪೂಜಾ ಕಾರ್ಯಕ್ರಮವನ್ನು ಮಾತ್ರ ವಿಧಿ–ವಿಧಾನದಂತೆ ಮಾಡಬೇಕು. ಹಿಂದಿನ ವರ್ಷಗಳಂತೆ ಸಹಸ್ರಾರು ಮಂದಿ ಸೇರಲು ಈ ಬಾರಿ ಅವಕಾಶವಿಲ್ಲ. ಅಂಗಡಿಕಾರರು ದೇವಸ್ಥಾನ ಆವರಣದಲ್ಲಾಗಲಿ, ರಸ್ತೆ ಬದಿಯಲ್ಲಾಗಲಿ ಅಥವಾ ದೇವಸ್ಥಾನದಿಂದ ಕೊಂಚ ದೂರದ ಹೊಲಗಳಲ್ಲಾಗಲಿ ಅಂಗಡಿಗಳನ್ನು ತೆರೆಯುವಂತಿಲ್ಲ. ಹಾಗೊಂದು ವೇಳೆ ಹಾಕಿದರೆ ಜಪ್ತಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪಿಡಿಒ ಬೀರಪ್ಪ ಕಡಗಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT