ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರದ ‘ತಂದೂರಿ ಭಟ್ಟಿ’ ಸ್ವಿಟ್ಜರ್‌ಲೆಂಡ್‌ಗೆ

ಹೋಟೆಲ್‌ಗಳಲ್ಲಿ ತಂದೂರಿ ಖಾದ್ಯ ತಯಾರಿಕೆಗೆ ಬಳಕೆ: ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೂ ಮಾರಾಟ
Last Updated 5 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಖಾನಾಪುರ: ತಂದೂರಿ ರೋಟಿ, ತಂದೂರಿ ನಾನ್, ತಂದೂರಿ ಕಬಾಬ್, ತಂದೂರಿ ಚಿಕನ್, ತಂದೂರಿ ಪಿಜ್ಜಾ, ತಂದೂರಿ ಚಹಾ... ಹೋಟೆಲ್ ಹಾಗೂ ಧಾಬಾಗಳಲ್ಲಿ ಸಿಗುವ ಈ ಖಾದ್ಯಗಳ ಹೆಸರು ಕೇಳಿದಾಗ ಬಾಯಲ್ಲಿ ನೀರೂರುವುದು ಸಹಜ. ಇವುಗಳ ತಯಾರಿಕೆಗೆ ಅಗತ್ಯವಿರುವ ಭಟ್ಟಿಗಳನ್ನು ತಯಾರಿಸುವಲ್ಲಿ ಖಾನಾಪುರದ ಕುಂಬಾರರು ಖ್ಯಾತಿ ಗಳಿಸಿದ್ದಾರೆ.

ಮಾರುಕಟ್ಟೆಯ ಬೇಡಿಕೆಯಂತೆ ಇಲ್ಲಿನ ಕುಂಬಾರರು ತಯಾರಿಸಿದ ತಂದೂರಿ ಭಟ್ಟಿಗಳು, ಕರ್ನಾಟಕ ಮಾತ್ರವಲ್ಲದೆ, ನೆರೆಯ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಗೂ ಮಾರಾಟವಾಗುತ್ತಿವೆ.

ತಯಾರಿಕೆ ಹೇಗೆ?: ‘ಸ್ಥಳೀಯವಾಗಿ ಲಭ್ಯವಿರುವ ಜೇಡಿ ಮಣ್ಣು, ಬಿಳಿ ಮಣ್ಣು ಹಾಗೂ ನದಿಯಲ್ಲಿ ದೊರೆಯುವ ಮರಳು ಬೆರೆಸಿ ತಂದೂರಿ ಭಟ್ಟಿ ತಯಾರಿಸಲಾಗುತ್ತದೆ. ಒಂದು ಭಟ್ಟಿ ತಯಾರಿಕೆಗೆ 15 ದಿನ ಬೇಕಾಗುತ್ತದೆ. ಗ್ರಾಹಕರ ಬೇಡಿಕೆಯಂತೆ ವಿವಿಧ ಗಾತ್ರ, ವಿನ್ಯಾಸಗಳಲ್ಲಿ ಭಟ್ಟಿ ತಯಾರಾಗುತ್ತವೆ. ಪ್ರತಿ ಭಟ್ಟಿ ದರ ಅಂದಾಜು ₹3 ಸಾವಿರದಿಂದ ₹5 ಸಾವಿರ ಇದೆ’ ಎಂದು ತಂದೂರಿ ಭಟ್ಟಿಗಳ ತಯಾರಕ ಶಂಕರ ಕುಂಬಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ವಿಟ್ಜರ್‌ಲೆಂಡ್‌ನಿಂದ ಇತ್ತೀಚೆಗೆ ಗೋವಾಗೆ ಬಂದಿದ್ದ ಕೆಲವು ಪ್ರವಾಸಿಗರು, ತಾವು ತಂಗಿದ್ದ ಪಂಚತಾರಾ ಹೋಟೆಲ್‌ನಲ್ಲಿ ನೀಡಲಾದ ತಂದೂರಿ ರೋಟಿ, ಕಬಾಬ್ ಹಾಗೂ ಬರ್ಗರ್‌ಗಳನ್ನು ಸೇವಿಸಿ ಖುಷಿಪಟ್ಟರು. ಈ ಖಾದ್ಯಗಳನ್ನು ತಯಾರಿಸುವ ಭಟ್ಟಿಗಳ ಬಗ್ಗೆ ಮಾಹಿತಿ ಪಡೆಯಲು ಖಾನಾಪುರಕ್ಕೆ ಬಂದಿದ್ದರು. ತಮ್ಮ ದೇಶಕ್ಕೆ ಮರಳುವಾಗ, ಇಲ್ಲಿ ತಯಾರಾದ ಭಟ್ಟಿ ತೆಗೆದುಕೊಂಡು ಹೋಗಿದ್ದಾರೆ. ನಂತರ, ಆ ಭಟ್ಟಿಯಲ್ಲಿ ತಾವೇ ಆಹಾರ ಖಾದ್ಯ ತಯಾರಿಸಿ, ನಮ್ಮೊಂದಿಗೆ ಖುಷಿ ಹಂಚಿಕೊಂಡಿದ್ದಾರೆ’ ಎಂದು ರವಿ ಕಾಡಗಿ ಹೇಳಿದರು.

‘ಖಾನಾಪುರದ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆಯಲ್ಲಿ ಆಸಕ್ತರಿಗೆ ಕುಂಬಾರಿಕೆ ಕಲೆ ತರಬೇತಿ ನೀಡಿ, ಸ್ವ ಉದ್ಯಮ ಕೈಗೊಳ್ಳಲು ಮಾರ್ಗದರ್ಶನ ನೀಡುತ್ತಿದ್ದೇವೆ. ಇಲ್ಲಿ ಮಣ್ಣಿನ ಉತ್ಪನ್ನಗಳು, ಆಲಂಕಾರಿಕ ಗೊಂಬೆಗಳು, ತಂದೂರಿ ಭಟ್ಟಿ, ಒಲೆಗಳು ಮತ್ತಿತರ ವಸ್ತುಗಳನ್ನು ತಯಾರಿಸುವ ಕಲೆ ಕರಗತ ಮಾಡಿಸುತ್ತಿದ್ದೇವೆ’ ಎನ್ನುತ್ತಾರೆ ಅಧಿಕಾರಿ ಗೋವರ್ಧನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT