ಶುಕ್ರವಾರ, ಡಿಸೆಂಬರ್ 3, 2021
20 °C

ಮುಗಳಖೋಡ: ಟ್ರ್ಯಾಕ್ಟರ್‌ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಗಳಖೋಡ: ‘2020-21ನೇ ಸಾಲಿನಿಂದಲೂ ಕೋವಿಡ್‌ ಹಾವಳಿಯಿಂದ ರೈತರು ಕಂಗಾಲಾಗಿದ್ದರೂ ಶೇ 98ರಷ್ಟು ಸಾಲ ಮರುಪಾವತಿ ಮಾಡಿರುವುದು ಸಂತಸದ ವಿಷಯ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಸಾಹೇಬ ಕುಲಗೂಡೆ ಹೇಳಿದರು.

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ವತಿಯಿಂದ ಫಲಾನುಭವಿಗಳಿಗೆ ಟ್ರ್ಯಾಕ್ಟರ್‌ ಕೀಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

‘ಶೇ 3 ಬಡ್ಡಿ ದರದಲ್ಲಿ 11 ಟ್ರ್ಯಾಕ್ಟರ್‌ಗಳನ್ನು ವಿತರಿಸಲಾಗುತ್ತಿದೆ. ಸಕಾಲದಲ್ಲಿ ರೈತರು ಸಾಲದ ಕಂತು ಮರು ಪಾವತಿ ಮಾಡಿದ್ದರಿಂದ ಸಬ್ಸಿಡಿ ರೂಪದಲ್ಲಿ ₹ 10.04 ಕೋಟಿಯನ್ನು ಸಂಘ ಪಡೆದಿರುವುದು ವಿಶೇಷವಾಗಿದೆ. ಸಂಘದ ಅಭಿವೃದ್ಧಿಗೆ ಇದು ತುಂಬಾ ಸಹಕಾರಿಯಾಗುತ್ತದೆ’ ಎಂದರು.

ಡಿಸಿಸಿ ಬ್ಯಾಕ್‌ ರಾಯಬಾಗ ತಾಲ್ಲೂಕು ನಿಯಂತ್ರಣಾಧಿಕಾರಿ ಬಿ.ಎಸ್‌. ರಬಗಲ್, ‘ದೀಪಾವಳಿ ಹಬ್ಬದ ಅಂಗವಾಗಿ ನಮ್ಮ ಪಿಕೆಪಿಎಸ್‌ ವತಿಯಿಂದ ವಾಹನ ಸಾಲ ವಿತರಣೆ ನೀಡಲಾಗುತ್ತಿದೆ. ರಿಯಾಯಿತಿ ಕೊಡಲಾಗುತ್ತಿದೆ’ ಎಂದು ತಿಳಿಸಿದರು.

ಅಧ್ಯಕ್ಷ ಭೀರಪ್ಪ ಶೇಗುಣಸಿ, ಉಪಾಧ್ಯಕ್ಷ ಲಕ್ಷ್ಮಣ ಗೋಕಾಕ, ನಿರ್ದೇಶಕರಾದ ಲಕ್ಷ್ಮಣ ಮುನ್ಯಾಳ, ರಾಮಚಂದ್ರ ಕುರಾಡೆ, ಕೆರೆಪ್ಪ ಮಂಟೂರ, ಚನ್ನಪ್ಪ ಯಡವಣ್ಣವರ, ಗಣಪತಿ ಕುಡ್ಡನ್ನವರ, ಮಹಾದೇವ ಉಗಾರ, ರಮೇಶ ಗುರವ, ಗೋಪಾಲ ಗೋಕಾಕ, ಅಪ್ಪಸಾಬ ಬಾಬಣ್ಣವರ, ತುಕಾರಾಮ ಗುರುವ, ಜಯಪಾಲ ಹಿಪ್ಪರಗಿ ಇದ್ದರು.

ಗಣಪತಿ ಕುರಾಡೆ ಸ್ವಾಗತಿಸಿದರು. ಸತೀಶಿ ಬಂದಿ ನಿರೂಪಿಸಿದರು. ಎಲ್‌.ಬಿ. ಮುನ್ಯಾಳ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು