ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ: ಒಳ್ಳೆಯದನ್ನಷ್ಟೆ ಅನುಕರಿಸಬೇಕು

Last Updated 3 ಫೆಬ್ರುವರಿ 2021, 6:19 IST
ಅಕ್ಷರ ಗಾತ್ರ

ನೋಡಿ ನೋಡಿ ಮಾಡುವ ನೇಮ ಸಲ್ಲವು! ಸಲ್ಲವು!

ತನುವುದ್ದೇಶ, ಮನವುದ್ದೇಶವಾಗಿ,

ಮಾಡುವ ನೇಮ ಸಲ್ಲವು! ಸಲ್ಲವು!

ಗುರುಪಥವ ಮೀರಿ ಮಾಡುವ ನೇಮ ಸಲ್ಲವು! ಸಲ್ಲವು!

ಕೂಡಲಸಂಗಮದೇವಯ್ಯಾ

ಇವು ನಿಮ್ಮ ನಿಜದೊಳಗೆ ನಿಲ್ಲವು; ನಿಲ್ಲವು.

ಮನುಷ್ಯನು ಇನ್ನೊಬ್ಬರನ್ನು ನೋಡಿ ಅನುಕರಿಸುವುದು ಸಹಜ ಗುಣವಾಗಿದೆ. ನಾವು ಅನುಕರಿಸುವ ಗುಣವು ಒಳ್ಳೆಯದಾಗಿದ್ದರೆ ಪರವಾಗಿಲ್ಲ. ಅದು ದುರ್ಗುಣವಾಗಿದ್ದರೆ, ತೊಂದರೆಗಳು ಎದುರಾಗುವುದು ಬಹಳ. ವ್ರತ ನೇಮಾದಿಗಳಲ್ಲಿಯು ಕೂಡ ಬೇರೆಯವರನ್ನು ಅನುಕರಿಸುತ್ತೇವೆ. ಅದರಿಂದ ಪ್ರಯೋಜನ ಎಷ್ಟರ ಮಟ್ಟಿಗೆ ಆಗುತ್ತದೆ ಎನ್ನುವುದಕ್ಕಿಂತ ನಮ್ಮ ಅನುಕರಣೆಯೆ ದೊಡ್ಡ ವಿಷಯವಾಗುತ್ತದೆ. ನಾವು ಆಚರಿಸುವ ವ್ರತವು ಅನುಕರಣೆ ಆಗದೆ ಆನಂದಿಸುವ ಅನುಭಾವವಾಗಬೇಕು. ವ್ರತಾಚರಣೆಗಳು ಮಾನಸಿಕವಾಗದೆ, ಮುಕ್ತವಾಗಿ ಆಚರಿಸುವ ಪ್ರಕ್ರಿಯೆಗಳಾಗಬೇಕು. ಗುರುಗಳ ಮಾರ್ಗದರ್ಶನವಿಲ್ಲದೆ ಯಾವ ಕಾರ್ಯವನ್ನೂ ಮಾಡಬಾರದು ಎನ್ನುವುದು ಈ ವಚನದ ಉದ್ದೇಶವಾಗಿದೆ. ಹಾಗೇನಾದರೂ ಮಾಡಿದರೆ ಅದು ಭಗವಂತನಿಗೆ ಸಲ್ಲುವುದಿಲ್ಲ ಎಂದು ಬಸವಣ್ಣನವರು ಇಲ್ಲಿ ತಿಳಿಸಿದ್ದಾರೆ. ನಾವು ಒಳ್ಳೆಯದನ್ನಷ್ಟೆ ಅನುಕರಿಸಿದರೆ ಎಲ್ಲರಿಗೂ ಒಳಿತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT