ಭಾನುವಾರ, ಏಪ್ರಿಲ್ 11, 2021
29 °C

ನಂಬಿಕೆಯಿಂದ ದೇವರನ್ನು ಪೂಜಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

*****

ನಂಬರು ನೆಚ್ಚರು ಬರಿದೆ ಕರೆವರು,

ನಂಬಲರಿಯರೀ ಲೋಕದ ಮನುಜರು!

ನಂಬಿ ಕರೆದಡೆ ಓ ಎನ್ನನೆ ಶಿವನು?

ನಂಬದೆ ನೆಚ್ಚದೆ ಬರಿದೆ ಕರೆವರ

ಕೊಂಬ ಮೆಟ್ಟಿ ಕೂಗೆಂದ

ಕೂಡಲಸಂಗಮದೇವ!

ನಂಬಿಕೆ ಎನ್ನುವುದು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದುದು. ನಮ್ಮ ಜೀವನದ ಎಲ್ಲ ಸಂದರ್ಭಗಳಲ್ಲಿ ನಂಬಿಕೆಯಿಂದಲೆ ನಾವು ಬದುಕಬೇಕಾಗುತ್ತದೆ. ಪ್ರಸ್ತುತ ದಿನಮಾನದಲ್ಲಿ ಈ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ನಂಬಿದವರೇ ಗೋನ ಕೋಯ್ವರು ಎಂಬಂತೆ ಹತ್ತಿರದವರಿಂದಲೇ ಮೋಸಕ್ಕೆ ಒಳಗಾಗುತ್ತೇವೆ. ಪ್ರಸ್ತುತ ವಚನದಲ್ಲಿ
ಬಸವಣ್ಣನವರು ಭಗವಂತನ ಆರಾಧನೆಯನ್ನು ಯಾವ ರೀತಿಯಾಗಿ ಮಾಡಬೇಕು ಎನ್ನುವುದನ್ನು ತಿಳಿಸಿದ್ದಾರೆ.

ಜಗತ್ತಿನ ಜನರು ಭಗವಂತನನ್ನು ಆರಾಧಿಸುತ್ತಾರೆ. ಆದರೆ ಅವನ ಮೇಲೆ ಶ್ರದ್ಧೆ, ಭಕ್ತಿ, ನಂಬಿಕೆ ಇರುವುದಿಲ್ಲ. ಭಗವಂತನನ್ನು ಅರಿಯುವ ಮಾರ್ಗವೇ ಜನರಿಗೆ ಗೊತ್ತಿಲ್ಲ. ನಂಬಿಕೆಯಿಂದ ಪ್ರಾರ್ಥಿಸಿದರೆ ಭಗವಂತ ಒಲಿಯುವದಿಲ್ಲವೆ? ನಂಬದೆ, ನೆಚ್ಚದೆ ಭಗವಂತನನ್ನು ಆರಾಧಿಸಿದರೆ, ಅದು ಅಹಂಕಾರವನ್ನು ಮನದಲ್ಲಿ ಇಟ್ಟುಕೊಂಡು ಆರಾಧಿಸಿದಂತೆ ಆಗುತ್ತದೆ ಎನ್ನುವುದು ಈ ವಚನದ ತಾತ್ಪರ್ಯವಾಗಿದೆ. ಅದನ್ನು ಪಾಲಿಸೋಣ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು