ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇವಿನ ಮರದ ಸಂಗದಲ್ಲಿ.. ಆಮ್ಲಜನಕ ಹೆಚ್ಚು ನೀಡುವ ಮರಗಳಿಗೆ ಮಹತ್ವ

ಶುದ್ಧ ಆಮ್ಲಜನಕಕ್ಕೆ ಗ್ರಾಮೀಣರ ಉಪಾಯ
Last Updated 29 ಮೇ 2021, 19:30 IST
ಅಕ್ಷರ ಗಾತ್ರ

ತೆಲಸಂಗ (ಬೆಳಗಾವಿ ಜಿಲ್ಲೆ): ಆಮ್ಲಜನಕ... ಈ ಪದ ಇತ್ತೀಚಿನ ದಿನಗಳಲ್ಲಿ ಬಾರಿ ಸದ್ದು ಮಾಡುತ್ತಿದೆ. ಆಮ್ಲಜನಕ ಸಿಗದ ಕಾರಣ ಕೋವಿಡ್ ಸೋಂಕಿತರು ಉಸಿರು ನಿಲ್ಲಿಸಿದ ಘಟನೆಗಳಿಂದ ಭಾರಿ ಮಹತ್ವ ಪಡೆದುಕೊಂಡಿದೆ.

ಸದ್ಯಕ್ಕೆ ಗ್ರಾಮೀಣ ಭಾಗದಲ್ಲಿ ಆಮ್ಲಜನಕ ಹೆಚ್ಚು ನೀಡುವ ಮರಗಳು ಭಾರಿ ಮಹತ್ವ ಪಡೆಯುತ್ತಿವೆ. ಇತ್ತೀಚಿಗೆ ಗ್ರಾಮೀಣ ಪ್ರದೇಶಕ್ಕೂ ಭಾರಿ ಪ್ರಮಾಣದಲ್ಲಿ ಕಾಲಿರಿಸಿರುವ ಕೊರೊನಾದಿಂದ ಜನರು ಎಚ್ಚೆತ್ತುಕೊಂಡಿದ್ದಾರೆ. ಅನವಶ್ಯ ಓಡಾಟದಿಂದ ತೊಂದರೆ ತಪ್ಪಿದ್ದಲ್ಲ; ಬದಲಿಗೆ ಆಮ್ಲಜನಕ ನೀಡುವ ಮರಗಳ ಕೆಳಗೆ ವಿಶ್ರಮಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ಕಾರಣಕ್ಕೆ ಮರಗಳ ಮೊರೆ ಹೋಗುತ್ತಿದ್ದಾರೆ.

ಗ್ರಾಮದ ಮಾರುಕಟ್ಟೆಯಲ್ಲಿನ ಬೇವಿನ ಮರ, ಮುಖ್ಯ ಬಜಾರ್‌ನಲ್ಲಿರುವ ಅರಳಿ ಮರ, ಅಂಬೇಡ್ಕರ್ ವೃತ್ತದಲ್ಲಿನ ಬೇವಿನ ಮರಗಳು ಸೇರಿದಂತೆ ಹೊಲಗಳಲ್ಲಿರುವ ಮರಗಳನ್ನು ಅರಸಿ ಹೋಗುತ್ತಿದ್ದಾರೆ. ಅವುಗಳ ನೆರಳಿನಲ್ಲಿ ವಿಶ್ರಾಂತಿಗೆ ತೆರಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

ಬೇವಿನ ಮರದಲ್ಲಿ ಹಲವು ರೋಗನಿವಾರಕ ಶಕ್ತಿ ನೀಡುವ ಗುಣಗಳಿವೆ ಎನ್ನುತ್ತಾರೆ ಗ್ರಾಮೀಣರು. ಔಷಧೀಯ ಗುಣಗಳುಳ್ಳ ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯವೂ ಅಲ್ಲಲ್ಲಿ ನಡೆಯುತ್ತಿರುವುದು ಕಾಣಸಿಗುತ್ತಿದೆ.

‘ಬೇವಿನ ಮರ ಸೇರಿದಂತೆ ಇನ್ನೂ ಅನೇಕ ಮರಗಳು ಔಷಧೀಯ ಗುಣ ಹೊಂದಿವೆ. ರೋಗನಿರೋಧಕ ಶಕ್ತಿ ನೀಡುತ್ತವೆ. ಆಲ, ಅರಳಿ ಮರಗಳು ಹೆಚ್ಚು ಆಮ್ಲಜನಕ ಒದಗಿಸುತ್ತವೆ. ಕೊರೊನಾ ಕಾಲದಲ್ಲಿ ಮಾತ್ರವಲ್ಲದೆ ಎಲ್ಲ ಕಾಲದಲ್ಲೂ ಮರಗಳು ಮನುಷ್ಯನಿಗೆ ಬಹಳಷ್ಟು ಉಪಕಾರಿಯಾಗಿವೆ. ಅವುಗಳ ಮಹತ್ವ ಈಗ ಮತ್ತಷ್ಟು ಹೆಚ್ಚಿದೆ’ ಎನ್ನುತ್ತಾರೆ ವೈದ್ಯ ಡಾ.ಬಿ.ಎಸ್. ಕಾಮನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT