ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ವಿಠ್ಠಲ ಮಂದಿರ ಜೀರ್ಣೋದ್ಧಾರಕ್ಕೆ ಚಾಲನೆ 

Published 14 ಜನವರಿ 2024, 14:51 IST
Last Updated 14 ಜನವರಿ 2024, 14:51 IST
ಅಕ್ಷರ ಗಾತ್ರ

ಮೂಡಲಗಿ: ‘ನಾಡಿನ ಪುರಾತನ ಮಂದಿರಗಳನ್ನು ಜೀರ್ಣೋದ್ಧಾರ ಮಾಡಿ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅವಕಾಶ ಮಾಡಿಕೊಡುವುದು ಅವಶ್ಯವಾಗಿದೆ. ಹೆಬ್ಬಳ್ಳಿಯ ಬ್ರಹ್ಮ ಚೈತನ್ಯ ಆಶ್ರಮದ ಪರವಾಗಿ ಈ ಕಾರ್ಯವನ್ನು ಮಾಡುತ್ತಿದ್ದೇವೆ’ ಎಂದು ಆಶ್ರಮದ ಗುರು ದತ್ತ ಅವಧೂತರು ಹೇಳಿದರು.

ತಾಲ್ಲೂಕಿನ ಯಾದವಾಡ ಗ್ರಾಮದ ಪುರಾತನ ಭವ್ಯ ವಿಠಲ ಮಂದಿರ ಜೀರ್ಣೋದ್ಧಾರ ಕಾರ್ಯವನ್ನು ಸ್ವತಃ ಗೋಡೆ ಕಟ್ಟುವ ಮೂಲಕ ಚಾಲನೆ ನೀಡಿದರು.

‘ಬ್ರಹ್ಮ ಚೈತನ್ಯ ಆಶ್ರಮದ ಪರವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸುಮಾರು 150 ಹಳೆಯ ಮಂದಿರಗಳ ಜೀರ್ಣೋದ್ಧಾರ ಕಾರ್ಯ ಮಾಡಲಾಗಿದೆ .ಹೆಬ್ಬಳ್ಳಿ, ಸವಣೂರು, ಹುಬ್ಬಳ್ಳಿ ಪಟ್ಟಣಗಳಲ್ಲಿ ಹೊಸ ಮಂದಿರಗಳನ್ನು ಕೂಡ ನಿರ್ಮಿಸಲಾಗಿದೆ. ಯಾದವಾಡದಲ್ಲಿ 5 ಮಂದಿರಗಳ ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಳ್ಳಲಾಗಿದೆ’ ಎಂದರು.

ಮಂದಿರಗಳು ಧಾರ್ಮಿಕ ಸಂಕೇತಗಳು ಮಾತ್ರವಲ್ಲ.ಅವು ಭಾರತೀಯ ಸಂಸ್ಕೃತಿ ಪ್ರತೀಕಗಳಾಗಿವೆ. ಮಂದಿರಗಳು ಜನಕ್ಕೆ ನೆಮ್ಮದಿ ,ಸಂತೋಷ ಮತ್ತು ಆಶ್ರಯವನ್ನು ಕೊಡುತ್ತವೆ ಎಂದು ಹೇಳಿದರು.

ಯಾದವಾಡದಲ್ಲಿ ವಿಠ್ಠಲ ಮಂದಿರ ಇರುವುದು ವಿಶೇಷವಾಗಿದ್ದು,ಇದು ಕರ್ನಾಟಕ ಮತ್ತು ಮಹಾರಾಷ್ಟ್ರದ ಐಕ್ಯತೆಯ ಪ್ರತೀಕವಾಗಿದೆ ಎಂದು ತಿಳಿಸಿದರು.  

ನಿವೃತ್ತ ತಹಶೀಲ್ದಾರ್ ಚಿದಂಬರ ನಾಮದಾರ್ ಮಾತನಾಡಿ, ವಿಠ್ಠಲ ಮಂದಿರದಲ್ಲಿ ಪೂಜೆ ,ಪ್ರವಚನ,ಧಾರ್ಮಿಕ ಕಾರ್ಯಗಳನ್ನು ಎರಡು ವರ್ಷಗಳಿಂದ ಸಂಘಟಿಸುತ್ತಿದ್ದಾರೆ .ಜನರಲ್ಲಿ ಧಾರ್ಮಿಕ ಶ್ರದ್ಧೆ ಹಾಗೂ ಐಕ್ಯತೆಯನ್ನು ಬೆಳೆಸುತ್ತಿದ್ದಾರ ಎಂದರು.

ಹೆಬ್ಬಳ್ಳಿ ಹಾಗೂ ಯಾದವಾಡದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT