ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ವಿವೇಕಾನಂದರ ತತ್ವಾದರ್ಶ ಮೈಗೂಡಿಸಿಕೊಳ್ಳಿ: ಶಾಸಕ ಮಹಾಂತೇಶ ಕೌಜಲಗಿ

Published 12 ಜನವರಿ 2024, 15:35 IST
Last Updated 12 ಜನವರಿ 2024, 15:35 IST
ಅಕ್ಷರ ಗಾತ್ರ

ಬೈಲಹೊಂಗಲ: 'ವಿಶ್ವಕ್ಕೆ ಭಗವದ್ಗೀತೆಯ ಸಾರ, ಸನಾತನ ಭವ್ಯ ಪರಂಪರೆ, ಸಂಸ್ಕೃತಿ, ಭಾತೃತ್ವ, ಸಂಸ್ಕಾರ ತಿಳಿಸಿಕೊಟ್ಟ ವೀರ ಸನ್ಯಾಸಿ ಯಾರಾದರೂ ಇದ್ದರೆ ಅದು ಸ್ವಾಮಿ ವಿವೇಕಾನಂದರು' ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಬಾಪೂಜಿ ಮಹಾವಿದ್ಯಾಲಯದಿಂದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ಅಂಗವಾಗಿ ಶುಕ್ರವಾರ ನಡೆದ ಸ್ವಾಮಿ ವಿವೇಕಾನಂದರ ಭಾವಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಒ ಸುಭಾಸ ಸಂಪಗಾಂವಿ,ಹಿರಿಯರಾದ ಮೋಹನ ಪಾಟೀಲ, ಎಂ.ಎಂ.ತೋರಣಗಟ್ಟಿ, ಪ್ರಕಾಶ ಯರಡಾಲ, ಎಸ್.ಡಿ.ಹೊಸಮನಿ, ಎಂ.ಬಿ.ಯಕ್ಕುಂಡಿ, ಎಸ್.ವ್ಹಿ. ಕಾರಿಮನಿ, ಎಚ್.ಎಂ.ಗೊರವನಕೊಳ್ಳ, ಡಿ.ಸಿ.ಹಿರೇಮಠ, ಜಿ.ಆರ್. ಕಾಜಗಾರ, ಎ.ಎಸ್.ಸಂಗೊಳ್ಳಿ, ಜಿ.ಎಫ್.ಬಡಿಗೇರ, ಎಂ.ಆರ್. ಪಾಟೀಲ, ಎಂ.ಡಿ.ಕುಲಕರ್ಣಿ, ವಿ.ಜಿ.ನಿಕ್ಕಮನವರ, ಆರ್.ಎ.ನದಾಫ, ಎಸ್.ಆರ್.ದೊಡವಾಡ ಅನೇಕರು ಇದ್ದರು.

ಜಾಥಾ ಮಹಾವಿದ್ಯಾಲಯದಿಂದ ಇಂಚಲ ರಸ್ತೆ, ಹಳೇ ಹನುಮಂತ ದೇವಸ್ಥಾನ ಮಾರ್ಗವಾಗಿ ಚನ್ನಮ್ಮ ಸಮಾಧಿ ತಲುಪಿತು. ವಿದ್ಯಾರ್ಥಿಗಳು ದೇಶಿ ಉಡುಗೆಯಲ್ಲಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT