ನಿಪ್ಪಾಣಿ: ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷರಾಗಿ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ ಸತತ 4ನೇ ಬಾರಿ ಅವಿರೋಧವಾಗಿ ಆಯ್ಕೆಯಾದರು.

ಉಪ ಕಾರ್ಯಾಧ್ಯಕ್ಷರಾಗಿ ರಾಮಗೊಂಡಾ ಅಲಿಯಾಸ್ ಪಪ್ಪು ಪಾಟೀಲ 3ನೇ ಬಾರಿ ಹಾಗೂ ಕಾರ್ಯದರ್ಶಿಗಳಾಗಿ ಎರಡನೇ ಬಾರಿ ಸಮೀರ ಬಾಗೇವಾಡಿ ಅವಿರೋಧವಾಗಿ ಆಯ್ಕೆಯಾದರು.

ಸೆ.4ರಂದು ವಿದ್ಯಾ ಸಂವರ್ಧಕ ಮಂಡಳದ 2024 ರಿಂದ 2029ರ ವರೆಗೆ ಆಡಳಿತ ಮಂಡಳಿಯ ಸದಸ್ಯರು ಅವಿರೋಧವಾಗಿ ಚುನಾಯಿತರಾಗಿದ್ದರು. ವಿಎಸ್‍ಎಂ ಸೋಮಶೇಖರ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಡಳ ಅಧ್ಯಕ್ಷ ಚಂದ್ರಕಾಂತ ತಾರಳೆ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂಜಿನಿಯರ್ ಸುನೀಲ ಪಾಟೀಲ, ರಜತ ಢೋಲೆ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಭರತ ಕುರಬೆಟ್ಟಿ, ಸಂಜಯ ಮೊಳವಾಡೆ, ಅವಿನಾಶ ಪಾಟೀಲ, ಗಣೇಶ ಖಡೇದ, ರಾವಸಾಹೇಬ ಪಾಟೀಲ, ಸಚ್ಚಿದಾನಂದ ಹಾಲಪ್ಪನವರ, ಪ್ರವೀಣ ಪಾಟೀಲ, ಶೇಖರ ಪಾಟೀಲ, ಆನಂದ ಗಿಂಡೆ, ರುದ್ರಕುಮಾರ ಕೋಠಿವಾಲೆ, ನ್ಯಾಯವಾದಿ ಸಂಜಯ ಶಿಂತ್ರೆ, ಸಿಇಒ ಸಿದ್ಧಗೌಡ ಪಾಟೀಲ, ಪ್ರಾಚಾರ್ಯ ಉಮೇಶ ಪಾಟೀಲ ಸೇರಿದಂತೆ ಎಲ್ಲ ಅಂಗಸಂಸ್ಥೆಗಳ ಪ್ರಾಚಾರ್ಯರು, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.