ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು ಆವರಣದಲ್ಲೇ ಬಿ.ಟೆಕ್. ಕೋರ್ಸ್ ಆರಂಭ

Last Updated 3 ಅಕ್ಟೋಬರ್ 2020, 14:14 IST
ಅಕ್ಷರ ಗಾತ್ರ

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ವಸತಿಸಹಿತ ಬಿ.ಟೆಕ್. ಕೋರ್ಸ್‌ಗಳನ್ನುಈ ಶೈಕ್ಷಣಿಕ ವರ್ಷದಿಂದ ಆರಂಭಿಸುತ್ತಿದೆ.

‘ಕಂಪ್ಯೂಟರ್ ಸೈನ್ಸ್ ಆಂಡ್ ಬಿಸಿನೆಸ್ ಸಿಸ್ಟಮ್, ರೊಬೊಟಿಕ್ಸ್ ಆಂಡ್ ಆಟೊಮೇಷನ್ ಹಾಗೂ ಮೆಕ್ಯಾನಿಕಲ್ ಆಂಡ್ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಕೋರ್ಸ್‌ಗಳನ್ನು ವಿಟಿಯು ಆವರಣದಲ್ಲೇ ನಡೆಸಲಾಗುವುದು’ ಎಂದು ಪ್ರಕಟಣೆ ತಿಳಿಸಿದೆ.

‘ಈ ಕಾರ್ಯಕ್ರಮಗಳಿಗಗೆ ಎಐಸಿಟಿಇ ಅನುಮೋದನೆ ನೀಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಆರ್ ಅಂಡ್ ಡಿ ಸಂಸ್ಥೆ ಕೇಂದ್ರ ಉತ್ಪಾದನಾ ತಂತ್ರಜ್ಞಾನ ಸಂಸ್ಥೆ (ಸಿಎಂಟಿಐ) ಮತ್ತು ‘ಎಂ ಟ್ಯಾಬ್’ ಜೊತೆಗೆ ಶೈಕ್ಷಣಿಕ ಮತ್ತು ಸಂಶೋಧನಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಪ್ಪಂದದ ಪ್ರಕಾರ ಈ ಸಂಸ್ಥೆಗಳ ಹಾಗೂ ಕಂಪನಿಗಳ ವಿಷಯ ಪರಿಣತರು ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ತರಬೇತಿ, ಅತಿಥಿ ಉಪನ್ಯಾಸ ಆಯೋಜನೆ, ಇಂಟರ್ನ್‌ಶಿಪ್‌ ಮತ್ತು ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನಕ್ಕೆ ತೊಡಗಿಸಿಕೊಳ್ಳಲಿವೆ’ ಎಂದು ಮಾಹಿತಿ ನೀಡಿದೆ.

‘ಟಿಸಿಎಸ್ ಸಹಭಾಗಿತ್ವದಲ್ಲಿ ಕಂಪ್ಯೂಟರ್ ಸೈನ್ಸ್ ಆಂಡ್ ಬಿಸಿನೆಸ್ ಸಿಸ್ಟಮ್ ಹಾಗೂ ಸಿಎಂಟಿಐ ಸಹಯೋಗದಲ್ಲಿ ರೊಬೊಟಿಕ್ಸ್ ಆಂಡ್ ಆಟೊಮೇಷನ್ ಬಿ.ಟೆಕ್ ಕೋರ್ಸ್‌ಗಳನ್ನು ಬೆಳಗಾವಿಯ ‘ಜ್ಞಾನಸಂಗಮ’ ಆವರಣ, ಸಿಎಂಟಿಐ ಸಹಭಾಗಿತ್ವದ ಇನ್ನೊಂದು ಕೋರ್ಸ್ ಮೆಕ್ಯಾನಿಕಲ್ ಆಂಡ್ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್‌ ಬಿ.ಟೆಕ್. ಅನ್ನು ಮುದ್ದೇನಹಳ್ಳಿ ಕ್ಯಾಂಪಸ್‌ನಲ್ಲಿ ಆರಂಭಿಸಲಾಗುವುದು. ವಸತಿನಿಲಯದ ಸೌಲಭ್ಯವಿದೆ. ಸಿಇಟಿ ಮೂಲಕ ಮಾತ್ರ ಪ್ರವೇಶ ನೀಡಲಾಗುವುದು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ನಿಗದಿಪಡಿಸಿದ ಅತ್ಯಂತ ಕಡಿಮೆ ಶುಲ್ಕ ಇರುತ್ತದೆ. ಪ್ರವೇಶ ಬಯಸುವವರು ಸಿಇಟಿ ಆನ್‌ಲೈನ್‌ ಕೌನ್ಸಲಿಂಗ್ ಮೂಲಕ ಪ್ರವೇಶ ಪಡೆಯಬಹುದು’ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT