ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಗರಗೋಳ | ಯಲ್ಲಮ್ಮ ದೇವಸ್ಥಾನದಲ್ಲಿ ‘ವಾಕಿಟಾಕಿ’ ಸೌಕರ್ಯ

Published : 9 ನವೆಂಬರ್ 2023, 15:40 IST
Last Updated : 9 ನವೆಂಬರ್ 2023, 15:40 IST
ಫಾಲೋ ಮಾಡಿ
Comments

ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ‘ವಾಕಿಟಾಕಿ’ ಸೌಕರ್ಯ ಕಲ್ಪಿಸಲಾಗಿದೆ.

ವಿವಿಧ ಹುಣ್ಣಿಮೆಗಳು, ಹಬ್ಬಗಳು ಮತ್ತು ರಜಾ ದಿನಗಳಲ್ಲಿ ಯಲ್ಲಮ್ಮನ ಸನ್ನಿಧಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇಲ್ಲಿ ಸಮರ್ಪಕವಾಗಿ ಮೊಬೈಲ್ ನೆಟ್‌ವರ್ಕ್‌ ಸಿಗದಿದ್ದರಿಂದ ಭಕ್ತರ ಸಮಸ್ಯೆಗೆ ಸ್ಪಂದಿಸಲು ಮತ್ತು ಜನದಟ್ಟಣೆ ನಿಯಂತ್ರಿಸಲು ಅಧಿಕಾರಿಗಳು ಪರದಾಡುವಂತಾಗಿತ್ತು. ಕೆಲವೊಮ್ಮೆ ಸಿಬ್ಬಂದಿಗೆ ತ್ವರಿತವಾಗಿ ಸೂಚನೆ ನೀಡವುದಕ್ಕೆ ಮೇಲಧಿಕಾರಿಗಳಿಗೂ ಸಮಸ್ಯೆಯಾಗಿತ್ತು. ಇದನ್ನು ನೀಗಿಸಲೆಂದು ಈಚೆಗೆ ವಾಕಿಟಾಕಿ ಸೌಕರ್ಯ ಪರಿಚಯಿಸಲಾಗಿದೆ.

‘ಪ್ರಥಮ ಹಂತವಾಗಿ 10 ವಾಕಿಟಾಕಿ ಖರೀದಿಸಿದ್ದೇವೆ. ಈ ಪೈಕಿ ನನ್ನ ಬಳಿ ಒಂದು ಇದೆ. ಉಳಿದಂತೆ ಅಧೀಕ್ಷಕರು, ಮೇಲ್ವಿಚಾರಕರು, ಎಂಜಿನಿಯರಿಂಗ್‌ ವಿಭಾಗ, ಕುಡಿಯುವ ನೀರು ಸರಬರಾಜು ವಿಭಾಗ, ವಿದ್ಯುತ್‌ ವಿಭಾಗ ಮತ್ತು ಟಿಕೆಟ್‌ ಕೌಂಟರ್‌ನಲ್ಲಿರುವ ಸಿಬ್ಬಂದಿಗೆ ವಾಕಿಟಾಕಿ ಒದಗಿಸಿದ್ದೇವೆ. ಇದರಿಂದಾಗಿ ತ್ವರಿತವಾಗಿ ಸಂವಹನಕ್ಕೆ ಅನುಕೂಲವಾಗುತ್ತಿದೆ’ ಎಂದು ಯಲ್ಲಮ್ಮ ದೇವಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ ತಿಳಿಸಿದರು.

‘ವಾಕಿಟಾಕಿ ಸೌಕರ್ಯದ ಸಾಧಕ–ಬಾಧಕ ಅಂಶಗಳ ಕುರಿತು ಪರಿಶೀಲಿಸುತ್ತೇವೆ. ಯೋಜನೆ ಸಫಲವಾದರೆ, ಎಲ್ಲ ಸಿಬ್ಬಂದಿಗೂ ಈ ಉಪಕರಣ ಒದಗಿಸುವ ಯೋಜನೆ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT