ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾರಿಮಾಸ್ತಿಹೊಳ್ಳಿ: ಲಕ್ಷ್ಮೀದೇವಿ ಗುಡಿಯಲ್ಲಿ ಕಳವು

Published 17 ಜೂನ್ 2024, 15:49 IST
Last Updated 17 ಜೂನ್ 2024, 15:49 IST
ಅಕ್ಷರ ಗಾತ್ರ

ಯಮಕನಮರಡಿ: ಭಾನುವಾರ ತಡರಾತ್ರಿ  ವಾರಿಮಾಸ್ತಿಹೊಳ್ಳಿಯ ಲಕ್ಷ್ಮೀದೇವಿಯ ಗುಡಿಯ ಕೀಲಿ ಮುರಿದು ಒಳನುಗ್ಗಿದ ಕಳ್ಳರು 1.40 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣವನ್ನು ದೋಚಿ ಪರಾರಿಯಾಗಿದ್ದಾರೆ.

ಘಟನೆ ಸೋಮವಾರ ಬೆಳಿಗ್ಗೆ ಗಮನಕ್ಕೆ ಬಂದಿದೆ. ದೇವಿಯ ಕೊರಳಿನಲ್ಲಿರುವ ಬಂಗಾರ ಬೋರಮಾಳ, ಎಕ್ಸರಾ ಸರ ಎರಡು,  ಬೆಳ್ಳಿಯ ಕುದುರೆ ಒಂದು, ಒಂದೂವರೆ ಕೆಜಿ  ಬೆಳ್ಳಿಯ ದೇವಿಯ ಮುಖವಾಡ,  500 ಗ್ರಾಂ ದೇವಿಯ ಕಿರೀಟ ಕಳವಾಗಿದೆ. ಈ ಘಟನಾ ಸ್ಥಳಕ್ಕೆ ಯಮಕನಮರಡಿ ಪಿಎಸ್ಐ ಶಿವು ಮನ್ನಿಕೇರಿ ಭೇಟಿ ನೀಡಿ ಪರಿಶೀಲಿಸಿದರು. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT