ನೀರಿನ ಸಮಸ್ಯೆ: ಸಿದ್ಧತೆ ಕೈಗೊಳ್ಳಿ

7
ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಮಹೇಶ ಸೂಚನೆ

ನೀರಿನ ಸಮಸ್ಯೆ: ಸಿದ್ಧತೆ ಕೈಗೊಳ್ಳಿ

Published:
Updated:
Deccan Herald

ಅಥಣಿ: ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಶಾಸಕ ಮಹೇಶ ಕುಮಠಳ್ಳಿ ಸೂಚನೆ ನೀಡಿದರು.

ತಾಲೂಕಾ ಪಂಚಾಯ್ತಿ ಸಭಾ ಭವನದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಗಳು 14ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಹಣ ಕಾಯ್ದಿರಿಸುವಂತೆ ತಿಳಿಸಿದರು.

ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದ ನದಿಗಳಲ್ಲಿ ನೀರು ಪ್ರಮಾಣ ದಿನೇದಿನೇ ಕಡಿಮೆ ಆಗುತ್ತಿದೆ. ತಾಂತ್ರಿಕ ದೋಷದಿಂದ ಸ್ಥಗಿತವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಬೋರವೆಲ್‌ಗಳನ್ನು ಕೂಡಲೇ ಸರಿಪಡಿಸಬೇಕು. ತೋಟದ ವಸತಿಗಳ ಜನತೆಗೆ ಟ್ಯಾಂಕರ್ಗಳ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ನರೇಗಾ ಕಾಮಗಾರಿ ಗಳನ್ನು  ಸೂಕ್ತ ರೀತಿಯಲ್ಲಿ ಕೈಗೊಂಡು, ನಿಗದಿತ ಅವದಿಯಲ್ಲಿ ಮುಗಿಸಬೇಕು. ಅಧಿಕಾರಿ ಗಳು ವೈಯಕ್ತಿಕ ಶೌಚಾಲಯಗಳನ್ನು ಬಳಸುವಂತೆ  ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಅವರು ಹೇಳಿದರು.

ತಾಲ್ಲೂಕು ಪಂಚಾಯ್ತಿ  ಕಾರ್ಯ ನಿರ್ವಾಹಕ ಅಧಿಕಾರಿ ರವಿಂದ್ರ ಬಂಗಾರೆಪ್ಪನವರ, ಸಹಾಯಕ ಅಭಿಯಂತರ ಎ.ಟಿ. ಅಸ್ಕಿ, ವ್ಯವಸ್ಥಾಪಕ ಉದಯ ಪಾಟೀಲ ಇದ್ದರು.

*
ಬೇಸಿಗೆಯಲ್ಲಿ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಬಹುದು. ಸಮರ್ಪಕ ನೀರಿನ ಪೂರೈಕೆಗಾಗಿ ಅಧಿಕಾರಿಗಳು ಈಗಿನಿಂದಲೇ ಯೋಜನೆ ರೂಪಿಸಬೇಕು.
-ಮಹೇಶ ಕುಮಠಳ್ಳಿ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !