ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯದಿಂದ ನೀರು ಹೊರಕ್ಕೆ

Last Updated 12 ಆಗಸ್ಟ್ 2022, 16:32 IST
ಅಕ್ಷರ ಗಾತ್ರ

ಸವದತ್ತಿ: ಮಲಪ್ರಭಾ ನದಿಯು ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನದಿಪಾತ್ರದ ಜನತೆಗೆ ಸೂಚನೆ ನೀಡಲಾಗಿದೆ.

ನವಿಲುತೀರ್ಥ ಜಲಾಶಯದ ಭರ್ತಿಗೆ ಕೆಲವೇ ಅಡಿಗಳು ಬಾಕಿ ಇದೆ.ಸದ್ಯ ಬರುವ ಒಳಹರಿವನ್ನು ತಡೆ ಹಿಡಿದರೆ ಕೇವಲ 2 ದಿನಗಳಲ್ಲಿ ಜಲಾಶಯದ ಭರ್ತಿಯಾಗುವ ಸಂಭವವಿದೆ. ಜಲಾಶಯದ ಭದ್ರತೆ, ಒಳಹರಿವು ಪರಿಗ ಣಿಸಿ ನೀರನ್ನು ಸಂಗ್ರಹಿಸಲಾಗುತ್ತಿದೆ.

ಗುರುವಾರ 15 ಸಾವಿರ ಕ್ಯುಸೆಕ್ ಇದ್ದ ಒಳಹರಿವು ಶುಕ್ರವಾರ 20 ಸಾವಿರ ಕ್ಯುಸೆಕ್‌ಗೆ ತಲುಪಿದೆ. ಗುರುವಾರ ನಾಲ್ಕು ಗೇಟ್ ತೆರೆದು 5 ಸಾವಿರ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ ಎಂದು ಜಲಾಶಯದ ಎಂಜಿನಿಯರ್ ವಿವೇಕ ಮುದಿಗೌಡರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT