ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಮಾತ್ಮನ ಸಂವಿಧಾನ ಮೀರಲು ಯಾರಿಗೂ ಸಾಧ್ಯವಿಲ್ಲ’

Last Updated 28 ನವೆಂಬರ್ 2020, 15:52 IST
ಅಕ್ಷರ ಗಾತ್ರ

ಅಥಣಿ: ‘ಜನರಿಗಾಗಿ ದೇವರ ಅಥವಾ ಪರಮಾತ್ಮನ ಸಂವಿಧಾನವಿದೆ. ಅದರ ಅಡಿಯಲ್ಲಿಯೇ ಪ್ರತಿಯೊಬ್ಬರೂ ಬದುಕಬೇಕು. ಅದನ್ನು ಮೀರಲು ಯಾರಿಗೂ ಸಾಧ್ಯವಿಲ್ಲ’ ಎಂದು ಪ್ರವಚನಕಾರ ಇಬ್ರಾಹಿಂ ಸುತಾರ ಹೇಳಿದರು.

ಸಮಿಪದ ದರೂರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಅವಲಿಂಗಮ್ಮ ದೇವಿ ಜಾತ್ರೆ ಹಾಗೂ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಪ್ರತಿ ಕಾರ್ಯವೂ ನೀತಿ–ನಿಯಮಗಳಿಂದ ಕೂಡಿರಬೇಕು. ಕಾಯಕ, ದಾಸೋಹ, ದಾನ, ಧರ್ಮಗಳು ಸೇರಿದಂತೆ ಸತ್ಕಾರ್ಯಗಳಿಂದ ನಾವು ಪರಮಾತ್ಮನ ಕೃಪೆಗೆ ಪಾತ್ರವಾಗಲು ಸಾಧ್ಯವಿದೆ’ ಎಂದರು.

‘ಶರಣರು ಮತ್ತು ದಾರ್ಶನಿಕರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಬೇಕು. ಯಾರೂ ಸುಲಭವಾಗಿ ಸಾಧನೆ ಮಾಡಿದವರಲ್ಲ. ಕಷ್ಟಗಳು ಯಾರನ್ನೂ ಬಿಟ್ಟಿಲ್ಲ. ಎಂತಹ ಕಷ್ಟ ಬಂದರೂ ಅವರು ಉಪವಾಸ, ವನವಾಸ ಅನುಭವಿಸಿದ್ದಾರೆ. ಆದರೆ ನೀತಿ– ಧರ್ಮ ಬಿಟ್ಟಿಲ್ಲ. ಆದ್ದರಿಂದಲೇ ಅವರು ಮಹಾತ್ಮರ ಸಾಲಿನಲ್ಲಿ ಕಂಗೊಳಿಸುತ್ತಿದ್ದಾರೆ’ ಎಂದು ತಿಳಿಸಿದರು.

ಲಲಿತಾ ತಾಯಿ, ಶಂಕರಹಟ್ಟಿಯ ಶಂಕರಾನಂದ ಶರಣರು, ಪುಣೆಯ ಉದ್ಯಮಿ ಚಂದ್ರಶೇಖರ ಗಾಣಿಗೇರ, ಮುರುಗೇಶ ಗಿರಿಸಾಗರ ಮಾತನಾಡಿದರು.

ವಕೀಲ ಬಸವರಾಜ ಅಂಬಿ, ಅಮೂಲ ನಾಯಿಕ, ಸುಭಾಸ ದಳವಾಯಿ, ತಮ್ಮಣ್ಣ ಸಾವಗಾಂವ, ಪರಪ್ಪ ಚೌಗಲಾ, ಬಸವರಾಜ ದರೂರ, ದುಂಡಪ್ಪ ಅವಟಿ, ಬಸವರಾಜ ಖೇಮಲಾಪುರ, ಪ್ರಕಾಶ ತೇಲಿ, ಚಿದಾನಂದ ತಾವಂಶಿ, ಶಿವಾನಂದ ನಂದಗಾಂವ, ರಾಘವೇಂದ್ರ ಮಂಗಸೂಳಿ, ರಾಜು ಅಥಣಿ, ಗಣೇಶ ಪಾಟೀಲ, ಶ್ರೀಶೈಲ ಗಾಣಿಗೇರ, ನರಸಪ್ಪ ಮಗದುಮ್ ಇದ್ದರು.

ಶಿವಾನಂದ ನಂದಗಾಂವ ನಿರೂಪಿಸಿದರು.

ದೇವಿಯ ಉತ್ಸವ ಪ್ರಮುಖ ಬೀದಿಗಳಲ್ಲಿ ಸಾಗಿತು. ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT