ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಓದಿನಿಂದ ಭಾಷೆ ಬೆಳವಣಿಗೆ

ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿಕೆ
Last Updated 26 ಜುಲೈ 2021, 13:47 IST
ಅಕ್ಷರ ಗಾತ್ರ

ಬೆಳಗಾವಿ: ‘ನಾವು ಪುಸ್ತಕಗಳನ್ನು ಓದಲೇಬೇಕು. ಆಗ ಮಾತ್ರ ಕನ್ನಡವೂ ಸೇರಿದಂತೆ ಭಾಷೆ ಮತ್ತು ಸಾಹಿತ್ಯ ಬೆಳೆಯಲು ಸಾಧ್ಯವಾಗುತ್ತದೆ’ ಎಂದು ಗದಗದ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ನಗರದ ಎಸ್‌ಜಿಬಿಐಟಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಶೋಕ ಮಳಗಲಿ ವಿರಚಿತ ‘ನೂರೊಂದು ಚುಟುಕು ಚಟಾಕಿಗಳು’ ಕವನಸಂಕಲನ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪುಸ್ತಕ ಬರೆದು, ಹೊರ ತಂದು ಅದನ್ನು ಮಾರುವುದು ಈಗ ಹೋರಾಟವೇ ಆಗಿದೆ’ ಎಂದು ಹೇಳಿದರು.

ಬಿಡುಗಡೆ ಮಾಡಿದ ಕವಿ ಅಲ್ಲಾಗಿರಿರಾಜ್‌ ಕನಕಗಿರಿ ಮಾತನಾಡಿ, ‘ಕವಿ ಪುಸ್ತಕ ಹೊರತರುವುದಕ್ಕಿಂತ ಮುಂಚೆ ಓದುಗರ ಗುಂಪು ರೂಪಿಸುವ ಅಗತ್ಯವಿದೆ’ ಎಂದರು.

ಸಾಹಿತಿ ಬಸವರಾಜ ಜಗಜಂಪಿ, ‘ಒಲೆ ಹೊತ್ತಿ ಉರಿದರೆ ನಿಲ್ಲಬಹುದು. ಧರೆ ಹೊತ್ತಿ ಉರಿಯುತ್ತಿರುವ ಇಂತಹ ಹೊತ್ತಿನಲ್ಲಿ ಸಾಹಿತ್ಯದ ಜೀವಂತಿಕೆ ಉಳಿಯಬೇಕು. ಇದಕ್ಕಾಗಿ ಹೊಸ ಕೃತಿಗಳು ಮಾದರಿಯಾಗಬೇಕು. ಸಾಹಿತ್ಯ ಶಾಲೆಯಿಂದಲೇ ಬರಬೇಕೆಂದಿಲ್ಲ, ಆಸಕ್ತಿ ಇದ್ದರೆ ಸಾಕು. ಅನುಭವ, ಅಭ್ಯಾಸ, ಎದೆಗಾರಿಕೆ, ಕಲಿಕೆ ಇದ್ದರೆ ಸಾಹಿತ್ಯ ಹೊರಹೊಮ್ಮುತ್ತದೆ. ಎಷ್ಟು ಪುಸ್ತಕ ಬರೆದೆ ಎನ್ನುವುದು ಮಹತ್ವದ್ದಲ್ಲ. ಗುಣಮಟ್ಟದ ಬರವಣಿಗೆ ಇದ್ದರೆ, ಹೊಸತನಕ್ಕೆ
ನೀರೆರೆದರೆ ಸಾಹಿತ್ಯ ಬೆಳೆದೀತು’ ಎಂದು ತಿಳಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಜಯಾನಂದ ಮಾದರ ಕೃತಿ ಪರಿಚಯಿಸಿದರು. ಪ್ರಕಾಶಕ ಮಂಗಳೂರಿನ ‘ಕಲ್ಲಚ್ಚು ಪ್ರಕಾಶನ’ದ ಮಹೇಶ ನಾಯಕ್ ಅವರನ್ನು ಸತ್ಕರಿಸಲಾಯಿತು.

ಬಿಇಒ ರವಿ ಭಜಂತ್ರಿ, ಸಾಹಿತಿಗಳಾದ ಎಲ್.ಎಸ್. ಶಾಸ್ತ್ರಿ, ಜಿನದತ್ತ ದೇಸಾಯಿ, ವಿರೂಪಾಕ್ಷ ತಿಗಡಿಕರ, ಸಿ.ಕೆ. ಜೋರಾಪೂರ, ಜಯಶ್ರೀ ನಿರಾಕಾರಿ, ಬಿ.ವಿ. ಹಿರೇಮಠ, ಪಿ.ಜಿ. ಕೆಂಪಣ್ಣವರ, ಎಂ.ಬಿ. ಹೊಸಳ್ಳಿ, ಶ್ರೀರಂಗ ಜೋಶಿ, ಶಿರೀಷ ಜೋಶಿ, ಸುನಂದಾ ಎಮ್ಮಿ, ಬಸವರಾಜ್ ಗಾರ್ಗಿ, ಎಂ.ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ, ವೀರಭದ್ರ ಅಂಗಡಿ, ಸಾಬಣ್ಣ ಕಳಸಕೊಪ್ಪ, ವಕೀಲ ರವೀಂದ್ರ ತೋಟಗೇರ ಇದ್ದರು.

ಅನ್ನಪೂರ್ಣಾ ಮಳಗಲಿ ತಂಡದವರು ವಚನ ಪ್ರಾರ್ಥನೆ ಮಾಡಿದರು. ಚುಟುಕು ಸಾಹಿತ್ಯ ಪರಿಷತ್ ಕಾರ್ಯಾಧ್ಯಕ್ಷೆ ದೀಪಿಕಾ ಚಾಟೆ ಸ್ವಾಗತಿಸಿದರು. ಜ್ಯೋತಿ ಬದಾಮಿ ವಂದಿಸಿದರು. ರಾಜೇಶ್ವರಿ ಹಿರೇಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT