ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದ ಆತ್ಮವಾದ ಸಂವಿಧಾನ ರಕ್ಷಿಸಬೇಕು’

Last Updated 27 ಫೆಬ್ರುವರಿ 2021, 15:17 IST
ಅಕ್ಷರ ಗಾತ್ರ

ಮುಗಳಖೋಡ: ‘ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನ ಭಾರತದ ಆತ್ಮವಿದ್ದಂತೆ. ಆತ್ಮಕ್ಕೆ ಅವಶ್ಯವಿರುವ ಆಮ್ಲಜನಕ ಅವರೇ ಆಗಿದ್ದಾರೆ’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ದಸಂಸ (ಭೀಮವಾದ) ವತಿಯಿಂದ ರಾಯಬಾಗ ತಾಲ್ಲೂಕಿನ ಹಿಡಕಲ್ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಂವಿಧಾನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮೂಢ ನಂಬಿಕೆಗಳಿಗೆ ಮಾರು ಹೋಗಿ ಹತ್ತು ಹಲವು ದೇವರುಗಳಿಗೆ ಹರಕೆ ಹೊತ್ತು ತಿರುಗಬೇಡಿ. ಗಡಿಯಲ್ಲಿ ನಮ್ಮ ರಕ್ಷಣೆಗಾಗಿ ಪಣ ತೊಟ್ಟು ನಿಂತಿರುವ ವೀರ ಯೋಧರೆ ನಿಜವಾದ ದೇವರು ಎನ್ನುವುದನ್ನು ಅರಿಯಬೇಕು’ ಎಂದರು.

‘ಹಲವು ಜಾತಿ, ಪಂಗಡಗಳಿರುವ ದೇಶಕ್ಕೆ ಸೂಕ್ತವಾದ ಸಂವಿಧಾನ ಬರೆದಿರುವ ಅಂಬೇಡ್ಕರ್ ಸಾಧನೆಯ ಹಿಂದೆ ಅವರು ಅನುಭವಿಸಿರುವ ಕಷ್ಟಗಳ ಸಂಕೋಲೆಯೆ ಇದೆ. ಆ ಸಂವಿಧಾನದ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಒಡೆದ ಹಾಲಿನಂತೆ ಒಡಕಾಗದೆ ಎಲ್ಲರೂ ಒಂದಾಗಿ ಸಂವಿಧಾನ ರಕ್ಷಿಸಬೇಕು’ ಎಂದು ತಿಳಿಸಿದರು.

ದಸಂಸ ರಾಜ್ಯ ಸಂಚಾಲಕ ಪರಶುರಾಮ ನೀಲನಾಯಕ, ‘ಕಲ್ಲು ದೇವರುಗಳಿಗೆ ಕೈ ಮುಗಿಯುವುದಕ್ಕಿಂತ ಅಂಬೇಡ್ಕರ್ ತತ್ವ–ಸಿದ್ಧಾಂತಗಳನ್ನು ಪಾಲಿಸುವ ಅನುಯಾಯಿಗಳಾಗಬೇಕು’ ಎಂದರು.

‘ಅಂಬೇಡ್ಕರ್ ಹೆಸರಿನಲ್ಲಿ ವಿವಿದ ಸಂಘಟನೆಗಳು ಇದ್ದರೂ ಅವುಗಳ ಆಶಯ ಒಂದೇ ಆಗಿದೆ. ಸಂವಿಧಾನ ರಕ್ಷಣೆ ಹಾಗೂ ಸಂವಿಧಾನ ಪಾಲನೆಯೇ ಎಲ್ಲರ ಉದ್ದೇಶವಾಗಿದೆ. ರಾಜ್ಯ ಸರ್ಕಾರ ಕೂಡಲೆ ಒಳ ಮೀಸಲಾತಿ ಜಾರಿಗೊಳಿಸಬೇಕು’ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ ಉದ್ಘಾಟಿಸಿದು. ಸಂಘಟನೆಯ ಸಂಚಾಲಕ ಪರಶುರಾಮ ನೀಲನಾಯಕ, ಮುಖಂಡರಾದ ಅಕ್ಷತಾ ಕೆ.ಸಿ. ಚಂದನ ದೂಪಧಾಳ, ಸುಖದೇವ ಮಾನೆ, ಅಣ್ಣಾಸಾಬ ಕುರಣೆ, ಮಹಾವೀರ ಮೋಹಿತೆ, ಸುರೇಶ ತಳವಾರ, ಸಿದ್ಧಾರ್ಥ ಸಿಂಗೆ, ಚಿದಾನಂದ ತಳಕೇರಿ, ಸಂಜೀವ ಕಾಂಬಳೆ, ಯಲ್ಲಪ್ಪ ಸಿಂಗೆ, ಎಂ.ಸಿ. ನಾರಾಯಣ, ಸಂಗೀತಾ ಕಾಂಬಳೆ, ರೇಖಾ ಬಂಗಾರಿ, ಆರ್.ಎಸ್. ಹಳ್ಯಾಪಗೋಳ, ಸಂತೋಷ ಕಾಂಬಳೆ, ಅಣ್ಣಪ್ಪ ಸೋಟನ್ನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT