ಬೈಲಹೊಂಗಲ:‘ಡಿ.22 ರಂದು ನಡೆಯಲಿರುವ ಲಿಂಗಾಯತ ಪಂಚಮಸಾಲಿ ಸಮಾಜದ ಪಂಚಶಕ್ತಿ ವಿರಾಟ ಸಮಾವೇಶಕ್ಕೆ ಬರುವವರನ್ನು ತಡೆಯೊಲ್ಲ. ಹೋರಾಟ ಶಾಂತರೀತಿಯಲ್ಲಿ ನಡೆಸಬೇಕು’ ಎಂದು ಎಡಿಜಿಪಿ ಅಲೋಕ್ ಕುಮಾರ ಹೇಳಿದರು.
ಬೈಲಹೊಂಗಲ ಚನ್ನಮ್ಮನ ಸಮಾಧಿ ಸ್ಥಳದಿಂದ ಬುಧವಾರ ಆರಂಭವಾದ ಪಾದಯಾತ್ರೆ ಸಾಣಿಕೊಪ್ಪ ಗ್ರಾಮ ಪ್ರವೇಶಿಸಿದ ವೇಳೆ ಅವರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಿದರು.
‘ಪ್ರಜಾಪ್ರಭುತ್ವದಲ್ಲಿ ವ್ಯವಸ್ಥೆಯಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ನಾವು ಬಂದುಬಸ್ತ್ ನೀಡುತ್ತೇವೆ. ಸಮಾವೇಶಕ್ಕೆ ಬರುವವರನ್ನು ಯಾರಾದರೂ ಎಲ್ಲಿಯಾದರೂ ತಡೆದರೆ ಆಯಾ ಜಿಲ್ಲಾ ಎಸ್ಪಿ, ನಗರ ಪೊಲೀಸ್ ಕಮಿಷನರ್ ಅಥವಾ 112 ಸಂಖ್ಯೆಗೆ ಕರೆ ಮಾಡಬೇಕು. ಯಾರನ್ನೂ ತಡೆಯಬಾರದು ಎಂದು ಈಗಾಗಲೇ ನಿರ್ದೇಶನ ನೀಡಲಾಗಿದೆ’ ಎಂದರು.
‘ಸಮಾವೇಶಕ್ಕೆ ಪಾದಯಾತ್ರೆ ಮೂಲಕ 20 ರಿಂದ 30 ಸಾವಿರ ಜನ ಬರಲಿದ್ದಾರೆ. ಆದರೆ, ವಾಹನ ಮೂಲಕ ಲಕ್ಷಲಕ್ಷ ಜನ ಬರುವವರಿದ್ದಾರೆ. ಎಷ್ಟೇ ಜನರು ಬಂದರೂ ಸೂಕ್ತ ಬಂದೂಬಸ್ತ್ ಕೈಕೊಳ್ಳಾಗುವುದು. ಈಗಾಗಲೇ ಹೆಚ್ಚುವರಿ 5 ಸಾವಿರ ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ’ ಎಂದರು.
ಐಜಿಪಿ ಎನ್.ಸತೀಕುಮಾರ, ಬೆಳಗಾವ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗೆಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂದೀಪ ಪಾಟೀಲ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಪಂಚಾಕ್ಷರಿ ಸಾಲಿಮಠ, ಸಿಬ್ಬಂದಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.