ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳೆ ಸಾಧನೆಗೆ ಬೇಕು ಪ್ರೋತ್ಸಾಹ’

Last Updated 28 ಮಾರ್ಚ್ 2023, 6:17 IST
ಅಕ್ಷರ ಗಾತ್ರ

ಗೋಕಾಕ: ‘ಪ್ರತಿಯೊಬ್ಬ ಮಹಿಳೆಯ ಸಾಧನೆಯ ಹಿಂದೆ ಪುರುಷರ ಪಾತ್ರ ಮಹತ್ವದಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತೆ ಸುಷ್ಮಿತಾ ಭಟ್ ಹೇಳಿದರು.

ಭಾನುವಾರ ನಗರದಲ್ಲಿ ಜಿ.ಸಿ.ಐ. ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ‘ಮನೆಯಲ್ಲಿ ಮಹಿಳೆ ಒಬ್ಬಳು ಕಲಿತರೆ ಇಡೀ ಕುಟುಂಬವೆ ಸಾಕ್ಷರತೆಯಾಗುತ್ತದೆ. ತಾಯಿಯೇ ಮೊದಲ ಗುರುವಾಗಿದ್ದು, ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿದೆ. ಬದುಕಿನಲ್ಲಿ ಸ್ತ್ರೀ ಮತ್ತು ಪುರುಷ ಸಮಾನರೆಂದು ತಿಳಿದು ಬದುಕಿದರೆ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ’ ಎಂದರು.

ಇದೇ ಸಂದರ್ಭದಲ್ಲಿ ಅತ್ತೆ– ಸೊಸೆಯಂದಿರ ನಡುವೆ ಬಾಂಧವ್ಯ ಹೆಚ್ಚಿಸುವಂತಹ ಸ್ವರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮವನ್ನು ಜೆಸಿಐ ಮಹಿಳಾ ಘಟಕದ ಅಧ್ಯಕ್ಷೆ ಭಾಗೀರಥಿ ನಂದಗಾವಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೇಯಾ ಜಾಧವ್, ಸ್ಮಿತಾ ದುಧಾಳೆ, ಧರಣಿ ಜರತಾರಕರ, ಗೋಕಾಕ ಅರ್ಬನ್ ಬ್ಯಾಂಕ್ ನಿರ್ದೇಶಕಿ ಶೋಭಾ ಕುರಬೇಟ, ಜೆಸಿಐ ವಲಯ ಉಪಾಧ್ಯಕ್ಷ ವಿಷ್ಣು ಲಾತೂರ, ಜೆಸಿಐ ಅಧ್ಯಕ್ಷ ಶೇಖರ್ ಉಳ್ಳೇಗಡಿ, ಪದಾಧಿಕಾರಿಗಳಾದ ರಾಜೇಶ್ವರಿ ಹಳ್ಳಿ, ಮಿನಾಕ್ಷಿ ಸವದಿ, ನೇತ್ರಾವತಿ ಲಾತೂರ, ರಾಜೇಶ್ವರಿ ಕಿತ್ತೂರ, ಪ್ರಜ್ಜಾ ಜಾಧವ, ಪೃಥ್ವಿ ಲಾತೂರ, ಕವಿತಾ ತುಪ್ಪದ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT