ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ನಗರದ ಕಾರ್ತಿಕ್ ಶಿವಾಜಿ ಪೋಲೆಣ್ಣವರ ಎನ್ನುವವರ ಮನೆಯಲ್ಲಿ ಗಣೇಶನ ಮೂರ್ತಿಯ ಜತೆಗೆ ಚಿರತೆ ಗೊಂಬೆಯನ್ನೂ ಪೂಜಿಸುತ್ತಿದ್ದಾರೆ. ಈ ಮೂಲಕ ಚಿರತೆ ಸೆರೆ ಹಿಡಿಯಲಾಗದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಟೀಕಿಸಿದ್ದಾರೆ.

ಕಳೆದ ಒಂದು ತಿಂಗಳಿಂದ ಇಲ್ಲಿನ ಗಾಲ್ಫ್ ಮೈದಾನದಲ್ಲಿ ಅವಿತ ಚಿರತೆ ಇದೂವರೆಗೂ ಸೆರೆ ಸಿಕ್ಕಿಲ್ಲ. ಈ ಕಾಡಿನ ಅತಿಥಿಯ ಕುರಿತಾದ ಹಲವು ಮಿಮ್‌ಗಳು, ತಮಾಷೆ ಪೋಸ್ಟರ್‌ಗಳು, ಅರಣ್ಯ ಇಲಾಖೆಯನ್ನು ಲೇವಡಿ ಮಾಡುವಂಥ ವಿಡಿಯೊ ತುಣುಕುಗಳು ಹರಿದಾಡುತ್ತಲೇ ಇವೆ. ಈಗ ಗಣಪನ ಜತೆಗೆ ಚಿರತೆಯ ಗೊಂಬೆ ಪೂಜೆ ಮಾಡಿದ ಕುಟುಂಬ ಗಮನ ಸೆಳೆದಿದೆ.

‘ಗಣೇಶನ ದರ್ಶನಕ್ಕೆ ಕಾಡಿನಿಂದ ನಾಡಿಗೆ ಬಂದಿರುವ ಚಿರತೆಗೆ ಆಟ; ಅರಣ್ಯ ಇಲಾಖೆ ಸಿಬ್ಬಂದಿಗೆ ಪರದಾಟ’ ಎಂಬ ಫಲಕವನ್ನೂ ಚಿರತೆ ಮುಂದೆ ಹಾಕಿದ್ದಾರೆ.

ಏತನ್ಮಧ್ಯೆ, ಶನಿವಾರ ಕೂಡ ಕಾರ್ಯಾಚಣೆಗೆ ಹೋದ ಎರಡು ಆನೆಗಳು ಹಾಗೂ ಸಿಬ್ಬಂದಿ ‘ಹೋದ ದಾರಿಗೆ ಸುಂಕವಿಲ್ಲ’ ಎಂದು ಮರಳಿದಂತಾಗಿದೆ.

ಹಗಲಿನಲ್ಲಿ 40, ರಾತ್ರಿ ಪಾಳಿಯಲ್ಲಿ 18 ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಂದು ವಾರದಿಂದ ಚಿರತೆಯ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.