ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಪ್‌ಲೈನ್‌ ಸಾಹಸ ಕ್ರೀಡೆ; ಬೆಳಗಾವಿಯಲ್ಲಿ ಸ್ಥಾಪನೆ: ಸಚಿವ ಸಾ.ರಾ. ಮಹೇಶ್‌

Last Updated 12 ಡಿಸೆಂಬರ್ 2018, 12:37 IST
ಅಕ್ಷರ ಗಾತ್ರ

ಬೆಳಗಾವಿ: ಪ್ರವಾಸಿಗರನ್ನು ಸೆಳೆಯುವಂತಹ ಸಾಕಷ್ಟು ಸ್ಥಳಗಳು ಬೆಳಗಾವಿಯಲ್ಲಿವೆ. ಪ್ರವಾಸೋದ್ಯಮಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲು ‘ಜಿಪ್‌ ಲೈನ್‌’ (ಎತ್ತರದ ಪ್ರದೇಶಗಳಲ್ಲಿ ಹಗ್ಗ ಕಟ್ಟಿಕೊಂಡು ಇಳಿಜಾರಿನಲ್ಲಿ ಸಾಗುವುದು) ಸಾಹಸ ಕ್ರೀಡೆಯನ್ನು ಇಲ್ಲಿ ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ಹೇಳಿದರು.

ಇಲ್ಲಿಗೆ ಸಮೀಪದ ಯಳ್ಳೂರಿನಲ್ಲಿರುವ ರಾಜಹಂಸಗಢದಲ್ಲಿ ಶಾಸಕ ಅಭಯ ಪಾಟೀಲ ನೇತೃತ್ವದ ಪರಿವರ್ತನ ಸಂಸ್ಥೆ ಬುಧವಾರ ಹಮ್ಮಿಕೊಂಡಿದ್ದ ಪ್ಯಾರಾಗ್ಲ್ಯಾಡಿಂಗ್‌ ಹಾಗೂ ಜಿಪ್‌ಲೈನ್‌ ಸಾಹಸ ಕ್ರೀಡೆಗೆ ಚಾಲನೆ ನೀಡಿ ಮಾತನಾಡಿದರು.

‘ಉತ್ತರ, ದಕ್ಷಿಣ ಎನ್ನದೇ ಸಮಾನವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದೇವೆ. ಚಾಮರಾಜನಗರದಲ್ಲಿ ಕೇಬಲ್‌ ಕಾರ್‌ ಅಳವಡಿಸಲಿದ್ದೇವೆ. ಅದೇ ರೀತಿ ಬೆಳಗಾವಿಯಲ್ಲಿ ಜಿಪ್‌ಲೈನ್‌ ಅಳವಡಿಸಲಿದ್ದೇವೆ. ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ಇತ್ತೀಚೆಗೆ ಪ್ಯಾರಾಗ್ಲ್ಯಾಡಿಂಗ್‌ ಹಾಗೂ ಜಿಪ್‌ಲೈನ್‌ ಸಾಹಸ ಕ್ರೀಡೆಗಳತ್ತ ಯುವಕರು ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಅವರಿಗೆ ಇಲ್ಲೊಂದು ಅವಕಾಶ ಕಲ್ಪಿಸಬೇಕೆಂದು ಪ್ರಾಯೋಗಿಕವಾಗಿ ಎರಡು ದಿನಗಳವರೆಗೆ ಇದನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಸ್ಥಳೀಯ ಯುವಕರು ಹೆಚ್ಚಿನ ಆಸಕ್ತಿ ತೋರಿದರೆ ಜನವರಿ– ಫೆಬ್ರುವರಿಯಲ್ಲಿ ಒಂದು ವಾರಗಳ ಕಾಲ ಪ್ಯಾರಾಗ್ಲ್ಯಾಡಿಂಗ್‌ ತರಬೇತಿ ಕೊಡಿಸುತ್ತೇವೆ ಎಂದು ತಿಳಿಸಿದರು.

ಜನವರಿಯಲ್ಲಿ ಗಾಳಿಪಟ ಉತ್ಸವ:

ಜನವರಿ 19ರಿಂದ ನಾಲ್ಕು ದಿನಗಳ ಕಾಲ ಅಂತರರಾಷ್ಟ್ರೀಯ ಗಾಳಿ ಪಟ ಉತ್ಸವವನ್ನು ಆಯೋಜಿಸಲಾಗುವುದು. ಈ ಸಲ ಸ್ಥಳ ಬದಲಾಯಿಸಲಾಗಿದ್ದು, ಅಲಾರವಾಡ ಕ್ರಾಸ್‌ ಬಳಿಯ ಮಾಲಿನಿ ಸಿಟಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT