ಬೆಳಗಾವಿ: ಆಟದಲ್ಲಿ ಸಮಯಪಾಲನೆಗೆ ಮಹತ್ವ ನೀಡಬೇಕು. ಸಮಯದ ಜೊತೆಗೆ ಓಡದಿದ್ದರೆ ಗೆಲುವಿನಿಂದ ದೂರ ಉಳಿಯಬೇಕಾಗುತ್ತದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.ನಗರದ ಸಿಪಿಇಡಿ ಮೈದಾನದಲ್ಲಿ ಬುಧವಾರ ಆರಂಭವಾದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಶಾಂತಿ ಸಂಕೇತವಾದ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

`ಅತಿಥಿಗಳಿಗಾಗಿ ಕಾಯುತ್ತಾ ಕ್ರೀಡಾಕೂಟ ಆರಂಭವನ್ನು ವಿಳಂಬ ಮಾಡುವುದು ಸರಿಯಲ್ಲ. ಇದನ್ನೇ ಕ್ರೀಡಾಪಟುಗಳ ಅಭ್ಯಾಸ ಮಾಡಿಕೊಂಡು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿಳಂಬವಾಗಿ ಹೋದರೆ ಆಟದಿಂದ ಹೊರಗೆ ಉಳಿಯಬೇಕಾಗುತ್ತದೆ~ ಎಂದು ಅವರು ತಿಳಿಸಿದರು.

`ಅತಿಥಿಗಳು ಬಾರದಿದ್ದರೂ ಮುಂದಿನ ಕ್ರೀಡಾಕೂಟಗಳನ್ನು ಸಮ ಯಕ್ಕೆ ಸರಿಯಾಗಿ ಆರಂಭಿಸುವ ಮೂಲಕ ಕ್ರೀಡಾಪಟುಗಳಿಗೆ ಮೇಲ್ಪಂಕ್ತಿ ಹಾಕಿಕೊಡಬೇಕು~ ಎಂದು ಅವರು ಸಲಹೆ ಮಾಡಿದರು. `ಆರೋಗ್ಯವಂತ ಯುವಕರು ಸದೃಢ ರಾಷ್ಟ್ರದ ಪ್ರತೀಕವಾಗಿದ್ದಾರೆ. ಆದ್ದ ರಿಂದ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ದೇಶವನ್ನೂ ಸದೃಢಗೊಳಿಸಬೇಕು~ ಎಂದರು.

`ರಾಜ್ಯ ಸರ್ಕಾರ ಕ್ರೀಡಾ ಇಲಾಖೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವ ದಿಸೆಯಲ್ಲಿ ತರಬೇತಿದಾರರು ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು~ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಫಿರೋಜ್ ಸೇಠ ಮಾತನಾಡಿ, ಕ್ರೀಡಾಕೂಟವು ಭವಿಷ್ಯ ರೂಪಿಸಿಕೊಳ್ಳುವ ವೇದಿಕೆಯಾಗಿದೆ. ಅದರ ಪ್ರಯೋಜವನ್ನು ಪಡೆದುಕೊಳ್ಳಬೇಕು. ರಾಜ್ಯ ಹಾಗೂ ರಾಷ್ಟ್ರಮಟ್ಟ ದಲ್ಲಿ ಗೆಲ್ಲುವ ಮೂಲಕ ಜಿಲ್ಲೆಯ ಹೆಸರು ಬೆಳೆಗಿಸಬೇಕು ಎಂದರು.

ಉಪಮೇಯರ್ ಧನರಾಜ ಗವಳಿ, ಸದಸ್ಯ ಅಜೀಂ ಪಟವೇಗಾರ, ಸಮಾಜ ಕಲ್ಯಾಣ ಅಧಿಕಾರಿ ಉಮಾ ಸಾಲಿಗೌಡರ, ಯುವ ಜನಸೇವಾ ಹಾಗೂ ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಪ್ರಕಾಶ ಹರಗಾಪುರ, ವ್ಯವಸ್ಥಾಪಕ ಆರ್.ಎಸ್. ಕಣಬರಗಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.