ಮೂಡಲಗಿ: ‘ಸದ್ಭಾವನೆ, ಮಾನವೀಯ ಮೌಲ್ಯಗಳನ್ನು ಹೊಂದಿರುವ ಭಾರತದ ಸಂಸ್ಕೃತಿಯನ್ನು ಇಡೀ ಜಗತ್ತು ಗೌರವಿ ಸುತ್ತದೆ’ ಎಂದು ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದರು. ಇಲ್ಲಿಯ ರೂರಲ್ ಡೆವೆಲೆಪಮೆಂಟ್ ಸೊಸೈಟಿಯ ಆತಿಥ್ಯದಲ್ಲಿ ಬೆಳಗಾವಿಯ ನೆಹರು ಯುವ ಕೇಂದ್ರ, ಜಿಲ್ಲಾ ಆಡಳಿತ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಭಾವೈಕ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾವೈಕ್ಯತೆ ಇದ್ದರೆ ಸಂಘಟನೆ, ಒಕ್ಕಟ್ಟು ಮತ್ತು ಅವುಗಳ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಬೆಳಗಾವಿಯ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಎಸ್. ಯು. ಜಮಾದಾರ ಮಾತನಾಡಿ ಭಾರ ತವು ವೈವಿದ್ಯಮಯವಾದ ಸಂಸ್ಕೃತಿ, ಪರಂಪರೆಯನ್ನು ಹೊಂದಿದೆ. ಅಂಥ ಸಂಸ್ಕೃತಿಯ ಅರಿವು ಮತ್ತು ಎಲ್ಲರೂ ಒಂದೇ ಎನ್ನುವ ಭಾವ ಮೂಡಿಸುವುದು ಶಿಬಿರದ ಉದ್ಧೇಶವಾಗಿದೆ ಎಂದರು.

ಪ್ರಭಾ ಶುಗರ್ಸ್ ಅಧ್ಯಕ್ಷ ಅಶೋಕ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಾನಿಧ್ಯ ವಹಿಸಿದ್ದ ಶ್ರೀಪಾದಬೋಧ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸ್ಥೆಯ ಅಧ್ಯಕ್ಷ ತಮ್ಮಣ್ಣ ಪಾರ್ಶಿ, ಪುರಸಭೆ ಅಧ್ಯಕ್ಷ ರಾಮಣ್ಣ ಹಂದಿಗುಂದ, ಉಪಾಧ್ಯಕ್ಷ ಹುಸೇನಸಾಬ್ ಶೇಖ್, ತಾ.ಪಂ. ಅಧ್ಯಕ್ಷೆ ಕಸ್ತೂರಿ ಕೋಣಿ, ಜಿ.ಪಂ. ಸದಸ್ಯ ಭೀಮಶಿ ಮಗದುಮ್, ಬಸಗೌಡ ಪಾಟೀಲ, ರವೀಂದ್ರ ಸೋನವಾಲಕರ, ಬಿಇಒ ಅಜೀತ ಮನ್ನಿಕೇರಿ, ಮಲ್ಲಪ್ಪ ಗಾಣಿಗೇರ, ಶಂಕರ ಮುಗೋಡ, ಮಲ್ಲಪ್ಪ ಮದಗುಣಕಿ, ಶಿವಬಸು ಖಾನಟ್ಟಿ, ಡಾ. ಪ್ರಕಾಶ ನಿಡಗುಂದಿ, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.