ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ 11 ಅಭ್ಯರ್ಥಿಗಳ ಕಣ

ರಾಘವೇಂದ್ರ ನಾಮಪತ್ರ ವಾಪಸ್‌
Last Updated 30 ಏಪ್ರಿಲ್ 2019, 17:03 IST
ಅಕ್ಷರ ಗಾತ್ರ

ಬಳ್ಳಾರಿ: ಲೋಕಸಭೆ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ವಾಪಸು ಪಡೆಯಲು ಕೊನೆಯ ದಿನವಾದ ಸೋಮವಾರ ಪಕ್ಷೇತರ ಅಭ್ಯರ್ಥಿ ರಾಘವೇಂದ್ರ ನಾಮಪತ್ರ ವಾಪಸ್‌ ಪಡೆದಿದ್ದು, ಕಣದಲ್ಲಿ ಅಂತಿಮವಾಗಿ 11 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.

ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದ ರಾಘವೇಂದ್ರ, ನಾಮಪತ್ರ ವಾಪಸ್‌ ಪಡೆಯುತ್ತಿರುವುದಾಗಿ, ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್ ಅವರಿಗೆ ತಿಳಿಸಿದರು.

11 ಅಭ್ಯರ್ಥಿಗಳು: ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ, ಬಿಜೆಪಿಯ ವೈ.ದೇವೇಂದ್ರಪ್ಪ, ಎಸ್‍ಯುಸಿಐಸಿ ಪಕ್ಷದ ಎ.ದೇವದಾಸ್-, ಬಿಎಸ್ಪಿಯ ಕೆ.ಗೂಳಪ್ಪ, ಭಾರತ ಪ್ರಭಾತ ಪಾರ್ಟಿಯ ಎಸ್.ನವೀನಕುಮಾರ್, ಆರ್‌ಪಿಐ (ಕರ್ನಾಟಕ)ದ ಪಿ.ಡಿ.ರಾಮನಾಯಕ್, ಸಮಾಜವಾದಿ ಪಕ್ಷದ ಟಿ.ವೀರೇಶ, ಶಿವಸೇನೆ ಪಕ್ಷದ ಈಶ್ವರಪ್ಪ ಅಂಜಿನಪ್ಪ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಬಿ.ರಘು, ಇಂಡಿಯನ್ ಲೇಬರ್ ಪಾರ್ಟಿಯ (ಅಂಬೇಡ್ಕರ್ ಫುಲೆ) ನಾಯಕರ ರಾಮಪ್ಪ ಹಾಗೂ ಪಕ್ಷೇತರರಾದ ವೈ.ಪಂಪಾಪತಿ, ಸೇರಿ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT