ಬುಧವಾರ, ಮೇ 25, 2022
29 °C

ಮಾಸ್ಕ್‌ ಧರಿಸದೇ ಓಡಾಟ: 999 ಪ್ರಕರಣ; ₹1.40 ಲಕ್ಷ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಭಾರತೀಯ ಮೋಟಾರ್‌ ವಾಹನ ಕಾಯ್ದೆ ಉಲ್ಲಂಘನೆ, ಮಾಸ್ಕ್‌ ಧರಿಸದೇ ಓಡಾಡುತ್ತಿರುವವರ ವಿರುದ್ಧ ಮಂಗಳವಾರ ಒಟ್ಟು 999 ಪ್ರಕರಣ ದಾಖಲಿಸಿರುವ ಪೊಲೀಸರು ಒಟ್ಟು ₹1.40 ಲಕ್ಷ ದಂಡ ಹಾಕಿದ್ದಾರೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಾಸ್ಕ್‌ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿದ್ದ 820 ಜನರ ವಿರುದ್ಧ ಪ್ರಕರಣ ದಾಖಲಿಸಿ ₹82 ಸಾವಿರ ದಂಡ ಹಾಕಿದ್ದಾರೆ. ಮೋಟಾರ್‌ ವಾಹನ ಕಾಯ್ದೆ ಉಲ್ಲಂಘನೆಯ 179 ಪ್ರಕರಣ ದಾಖಲಿಸಿ ₹58 ಸಾವಿರ ದಂಡ ಹಾಕಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು