ಬುಧವಾರ, ಆಗಸ್ಟ್ 10, 2022
21 °C

ವಾಹನ ಪಲ್ಟಿ: ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲಾಪುರ: ವಾಹನವೊಂದು ಪಲ್ಟಿಯಾಗಿ ಬಾಲಕಿ ಸೇರಿ ಇಬ್ಬರು ಮೃತಪಟ್ಟಿದ್ದು, 6 ಜನ ಗಾಯಗೊಂಡಿರುವ ಘಟನೆ ಮಂಗಳವಾರ ತಾಲ್ಲೂಕಿನ ಡೊಂಗರಗಾಂವ ಕ್ರಾಸ್‌ ಬಳಿ ನಡೆದಿದೆ.

ಕಲಬುರ್ಗಿಯ ಎಂಎಸ್‌ಕೆ ಮಿಲ್‌ ಇಲಾಹಿ ಮಜ್ಜಿದ್‌ ಬಡಾವಣೆಯ ನಿವಾಸಿ ಮಹಮ್ಮದ್‌ ಅಕ್ಬರ್‌ ಮಹಮ್ಮದ ಅಖ್ತರ್ (37) ಹಾಗೂ ಇವರ ಸಂಬಂಧಿಯ ಮಗಳಾದ ತಸ್ಮಿಯಾ ತಜೀನ್‌ (7) ಮೃತಪಟ್ಟಿದ್ದಾರೆ.

ಕಲಬುರ್ಗಿಯಿಂದ ಹುಮನಾಬಾದ್‌ನಲ್ಲಿರುವ ತಮ್ಮ ಸಹೋದರಿಯ ಮನೆಗೆ ತೆರಳುತ್ತಿದ್ದರು. ಡೋಂಗರಗಾಂವ ಕ್ರಾಸ್‌ ಬಳಿ ಟವೇರಾ ಪಲ್ಟಿಯಾಗಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಕ್ಬರ್‌ ಹಾಗೂ ಬಾಲಕಿ ತಸ್ಮೀಯಾ ಕೊನೆಯುಸಿರೆಳೆದಿದ್ದಾರೆ.

ಇನ್ನುಳಿದ ಅರ್ಶದ್‌ ಸೈಯ್ಯದ್‌ ಎಜಾಜ್‌, ಶಾಹಿನಾ ಬೇಗಂ ರಾಜ ಅಹಮ್ಮದ್‌, ಅರ್ಷಿಯಾ ಅಖ್ತರ್‌, ಅಖಶಾ ಮಹಮ್ಮದ್‌ ಏಜಾಜ್‌, ಶಾಹೀನ ಬಾನು ಮಹಮ್ಮದ್ ಎಜಾಜ್‌, ಮಹಮ್ಮದ್‌ ರಾಜ್‌ ಅಹಮ್ಮದ್‌ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.