ಭಾನುವಾರ, ನವೆಂಬರ್ 29, 2020
24 °C

ಕಬಿನಿ ಬಳಿ ನಿರ್ಮಿಸುತ್ತಿರುವುದು ರೆಸಾರ್ಟ್ ಅಲ್ಲ‌: ಕೆ.ಎಸ್‌.ನರಸಿಂಹಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನ ಬಳಿ ನಿರ್ಮಿಸುತ್ತಿರುವುದು ‘ರೆಸಾರ್ಟ್ ಅಲ್ಲ; ಫಾರ್ಮ್‌ ಹೌಸ್‌’ ಎಂದು ಬಳ್ಳಾರಿಯ ಕೆ.ಎಸ್‌.ನರಸಿಂಹಮೂರ್ತಿ ಎಂಬುವವರು ಹೇಳಿದ್ದಾರೆ. 

‘ಈ ಕಟ್ಟದ ಮಾಲೀಕ ನಾನೇ ಆಗಿದ್ದು, ಇದು ಸ್ವಯಾರ್ಜಿತ ಆಸ್ತಿ. ಸ್ವಂತ ಉಪಯೋಗಕ್ಕೆ ಕಟ್ಟಿಸಿಕೊಳ್ಳುತ್ತಿದ್ದೇನೆ. ಬೇನಾಮಿ ಹೆಸರಿನಲ್ಲಿ ನಿರ್ಮಿಸಲಾಗುತ್ತಿದೆ ಎಂಬ ವಿಚಾರ ಸತ್ಯಕ್ಕೆ ದೂರವಾದದು. ಈ ಆಸ್ತಿ ಮೇಲೆ ಬೇರೆ ಯಾರ ಹಕ್ಕೂ ಇಲ್ಲ’ ಎಂದಿದ್ದಾರೆ.

‘ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 95ರ ಅನ್ವಯ ಕೃಷಿ ಜಮೀನಿನಲ್ಲಿ ಫಾರ್ಮ್‌ ಹೌಸ್‌ ಕಟ್ಟಿಸಿಕೊಳ್ಳಲು ಅವಕಾಶವಿದೆ. ಅದಕ್ಕೆ ಭೂಪರಿವರ್ತನೆ ಅಥವಾ ಪರವಾನಗಿ ಬೇಕಿಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.