ಶುಕ್ರವಾರ, ಡಿಸೆಂಬರ್ 4, 2020
24 °C
ತುಂಗಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆ ಹಿನ್ನೆಲೆ

ರೈತರೊಂದಿಗೆ ಸಮಾಲೋಚನೆ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಂಪ್ಲಿ: ತುಂಗಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆ ನ.21ರಂದು ನಡೆಯುವ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿಯ ಶಾಸಕರ ಜನಸಂಪರ್ಕ ಕಚೇರಿ ಆವರಣದಲ್ಲಿ ಕ್ಷೇತ್ರದ ರೈತರೊಂದಿಗೆ ಸಮಾಲೋಚನೆ ಸಭೆ ಜರುಗಿತು.

ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ‘ರೈತರ ಅನುಕೂಲಕ್ಕಾಗಿ ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ(ಎಚ್‍ಎಲ್‍ಸಿ)ಗೆ 2021ರ ಜನವರಿ 20ರ ವರೆಗೆ ಆನ್ ಆ್ಯಂಡ್ ಆಫ್ ಪದ್ಧತಿ ಕೈಬಿಟ್ಟು ನಿರಂತರವಾಗಿ ನೀರು ಹರಿಸಲು ಮತ್ತು ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ(ಎಲ್‍ಎಲ್‍ಸಿ)ಗೆ 2021ರ ಏ.20ರ ವರೆಗೆ ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೋಟಾ ನೀರು ಹರಿಸುವಂತೆ ಐಸಿಸಿ ಸಭೆಯಲ್ಲಿ ಒತ್ತಾಯಿಸಲಾಗುವುದು’ ಎಂದರು.

‘ಎಚ್‍ಎಲ್‍ಸಿಯ ಡಿ-3, ಡಿ-7, ಡಿ-12, ಡಿ-13, ಡಿ-14 ವಿತರಣಾ ಕಾಲುವೆಗೆ ನೀರಿನ ಪ್ರಮಾಣ ಹೆಚ್ಚಿಸುವಂತೆ ಮನವಿ ಮಾಡುವುದಾಗಿ’ ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಅನೇಕ ರೈತರು ಮಾತನಾಡಿ, ಆಂಧ್ರಪ್ರದೇಶದ ನೀರಾವರಿ ಇಲಾಖೆ ಅಧಿಕಾರಿಗಳಂತೆ ನಮ್ಮ ರಾಜ್ಯದ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಭತ್ತ ಖರೀದಿ ಕೇಂದ್ರ ಆರಂಭಿ ಸುವಂತೆ ಮತ್ತು ಸರ್ಕಾರದ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಭತ್ತ ಖರೀದಿ ಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ, ತುಂಗಭದ್ರಾ ಐಸಿಸಿ ಸಭೆಗೆ ರೈತರನ್ನು ಆಹ್ವಾನಿಸುವಂತೆ’ ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಂಗಿ ಮಲ್ಲಯ್ಯ, ರೈತ ಮುಖಂಡರಾದ ಚೆಲ್ಲಾ ವೆಂಕಟನಾಯ್ಡು, ಕೊಟ್ಟೂರು ರಮೇಶ್, ಕಾಸೀಂಸಾಬ್, ಎಂ. ರಾಘವೇಂದ್ರ, ಲಕ್ಷ್ಮಿಕಾಂತರೆಡ್ಡಿ, ಬಸವರಾಜ, ಸುರೇಶರೆಡ್ಡಿ, ರಾಮಪ್ಪ ಕಪ್ಪಗಲ್, ರಂಗಾರೆಡ್ಡಿ, ವೆಂಕಟರೆಡ್ಡಿ, ಸೂಗೂರಪ್ಪ, ತಿಮ್ಮಾರೆಡ್ಡಿ, ಮಲ್ಲಿ ಕಾರ್ಜುನ, ವೆಂಕಟರಾಮರಾಜು, ತಾ. ಪಂ. ಸದಸ್ಯ. ಕೆ. ಷಣ್ಮುಖಪ್ಪ, ಈರಣ್ಣ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.