ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಗೋಡೆ ಚಿತ್ರಗಳಿಂದ ಕೊರೊನಾ ಜಾಗೃತಿ

Last Updated 18 ಏಪ್ರಿಲ್ 2020, 8:25 IST
ಅಕ್ಷರ ಗಾತ್ರ

ಹೊಸಪೇಟೆ: ಗೋಡೆ ಚಿತ್ರಗಳ ಮೂಲಕ ಕೊರೊನಾ ಸೋಂಕು ಹರಡದಂತೆ ಜಾಗೃತಿ ಮೂಡಿಸುವ ಕೆಲಸ ಇಲ್ಲಿನ ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ ಅವರು ವಿಶೇಷ ಮುತುವರ್ಜಿ ವಹಿಸಿ ಮಾಡಿಸುತ್ತಿದ್ದಾರೆ.

‘ಗ್ರೀನ್ ಹೊಸಪೇಟೆ’ ಮತ್ತು ‘ವಿಶ್ವ ಚಿತ್ರಕಾಲ’ ಸಂಸ್ಥೆಯ ಕಲಾವಿದರ ನೆರವಿನೊಂದಿಗೆ ಈ ಕೆಲಸ ನಡೆಯುತ್ತಿದೆ. ನಗರಸಭೆ ಕಚೇರಿ ಸೇರಿದಂತೆ ಅದಕ್ಕೆ ಸೇರಿದ ಕಟ್ಟಡಗಳು, ಕಾಂಪೌಂಡ್‌ ಮೇಲೆ ಕೊರೊನಾ ಸೋಂಕು ತಗುಲದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಬಳಕೆ, ಸ್ಯಾನಿಟೈಸರ್‌ ಬಳಕೆ ಬಗ್ಗೆ ಚಿತ್ರಗಳನ್ನು ಬಿಡಿಸಲಾಗುತ್ತಿದೆ.

‘ಗ್ರೀನ್‌ ಹೊಸಪೇಟೆಯ’ ಸುನೀಲ್ ಗೌಡ, ರಘುವೀರ್, ನಾಗೇಶ್ ನಾಯ್ಡು, ಉದಯ್ ಕಿರಣ್, ನವೀನ್, ಇಮ್ರಾನ್ ಖಾನ್, ‘ವಿಶ್ವ ಚಿತ್ರಕಾಲ’ ಸಂಸ್ಥೆಯ ಆರ್ಜುನ್, ರಾಜಶೇಖರ್, ನವೀನ್, ನಾಗೇಶ್, ಶಂಶಾಕ್‌, ಹರಿ ಭಿನ್ನಭಿನ್ನ ಚಿತ್ರಗಳನ್ನು ಬಿಡಿಸುತ್ತಿದ್ದಾರೆ.

ಈಗಾಗಲೇ ಇಲಾಖೆಯು ಕಸ ಸಂಗ್ರಹಿಸುವ ವಾಹನಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT