ಸೋಮವಾರ, ಏಪ್ರಿಲ್ 6, 2020
19 °C
ಗಾಳೆಮ್ಮ ದೇವಿಗೆ ವಿಶೇಷ ಪೂಜೆ, 101 ಕಾಯಿ ಒಡೆದರು

ಡಿಕೆಶಿ ಅಭಿಮಾನಿ ಬಳಗದಿಂದ ಸಂಭ್ರಮಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಡಿ.ಕೆ.ಶಿವಕುಮಾರ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಸಾರಥ್ಯ ವಹಿಸಿರುವುದಕ್ಕೆ ಅವರ ಅಭಿಮಾನಿ ಬಳಗದವರು ಶುಕ್ರವಾರ ನಗರದಲ್ಲಿ ಸಂಭ್ರಮಾಚರಣೆ ಮಾಡಿದರು.

ನಗರದ ರೋಟರಿ ವೃತ್ತದಲ್ಲಿ ಸೇರಿದ ಬಳಗದವರು, ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಶಿವಕುಮಾರ ಭಾವಚಿತ್ರ, ಅವರ ಛಾಯಾಚಿತ್ರವಿರುವ ಧ್ವಜಗಳನ್ನು ಹಿಡಿದುಕೊಂಡು ಅವರ ಪರ ಘೋಷಣೆಗಳನ್ನು ಕೂಗಿದರು.

ಇದಕ್ಕೂ ಮುನ್ನ ತಾಲ್ಲೂಕಿನ ಹಂಪಿ ರಸ್ತೆಯ ಗಾಳೆಮ್ಮ ದೇವಸ್ಥಾನದಲ್ಲಿ ಗಾಳೆಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, 101 ಕಾಯಿ ಒಡೆದರು. ಅಲ್ಲಿಂದ ನಗರದ ವರೆಗೆ ರ್‍ಯಾಲಿ ನಡೆಸಿದರು.

ಸಂಘದ ಅಧ್ಯಕ್ಷ ಎಸ್‌.ಜಿ. ಮಂಜುನಾಥ ಮಾತನಾಡಿ, ‘ಡಿ.ಕೆ. ಶಿವಕುಮಾರ ಅವರು ತಳಹಂತದಿಂದ ಬೆಳೆದು ಬಂದ ನಾಯಕರು. ಅವರಿಗೆ ಜನರ ಕಷ್ಟ–ಸುಖ ಏನೆಂಬುದು ಗೊತ್ತು. ಕಷ್ಟಕಾಲದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕೈಹಿಡಿದು ಬೆಳೆಸಿದ್ದಾರೆ. ಅವರ ನಾಯಕತ್ವದಲ್ಲಿ ಪಕ್ಷ ಮತ್ತಷ್ಟು ಸಂಘಟನೆ ಹೊಂದಿ, ಬರುವ ದಿನಗಳಲ್ಲಿ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಭರವಸೆ ವ್ಯಕ್ತಪಡಿಸಿದರು.

ಸಂಘದ ಮುಖಂಡರಾದ ಗುಜ್ಜಲ್‌ ನಾಗರಾಜ, ವೀರಸ್ವಾಮಿ, ಅಯ್ಯಾಳಿಮೂರ್ತಿ, ಶೇಕ್ಷಾವಲಿ, ಕೃಷ್ಣಾ, ಸಂಜಯ್, ರಮೇಶ, ಗಣೇಶ್‌, ಕುಬೇರ್‌ ದಲ್ಲಾಲಿ, ತಿಮ್ಮಪ್ಪ ಯಾದವ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು