ಕೂಡ್ಲಿಗಿ (ಬಳ್ಳಾರಿ): ಕೃಷಿ ಭೂಮಿ ಹೊಂದಿಲ್ಲದ ಪಾಲಕರ ಮಕ್ಕಳಿಗೂ ಬಿಎಸ್ಸಿ ಕೃಷಿ ಪದವಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಇಲ್ಲಿನ ವಿದ್ಯಾರ್ಥಿನಿಯೊಬ್ಬರು ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೆ ಪತ್ರ ಬರೆದು, ಮನವಿ ಮಾಡಿಕೊಂಡಿದ್ದಾರೆ.
ಪಟ್ಟಣದ 19ನೇ ವಾರ್ಡ್‌ನ ಕೆ.ಕೆ ಹಟ್ಟಿ ನಿವಾಸಿ, ಡಿ.ಭಾರತಿ ಪತ್ರ ಬರೆದಿದ್ದು, ‘ನನ್ನ ತಂದೆಗೆ ಸ್ವಂತ ಕೃಷಿ ಭೂಮಿ ಇಲ್ಲ. ಬೇರೊಬ್ಬರ ಜಮೀನಿನಲ್ಲಿ ದುಡಿಯುತ್ತಾರೆ. ನನಗೆ ಬಿ.ಎಸ್ಸಿ ಕೃಷಿ ಕಲಿಯಬೇಕೆಂದು ತುಂಬಾ ಆಸಕ್ತಿಯಿದೆ. ಆದರೆ, ಪಾಲಕರ ಹೆಸರಿನಲ್ಲಿ ಪಹಣಿ ಪತ್ರ ಇಲ್ಲದ್ದರಿಂದ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.
‘ಪದವಿಗೆ ಪ್ರವೇಶ ಪಡೆಯಬೇಕಾದರೆ ಕೃಷಿಕರ ಮಕ್ಕಳಾಗಿರಬೇಕು ಎನ್ನುವ ನಿಯಮ ನನಗೆ ಅಡ್ಡಿಯಾಗಿದೆ. ದಯವಿಟ್ಟು, ಈ ನಿಯಮವನ್ನು ಸಡಿಲುಗೊಳಿಸಬೇಕು. ಆಸಕ್ತರಿಗೆ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಕೋರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.