ಶುಕ್ರವಾರ, ಸೆಪ್ಟೆಂಬರ್ 24, 2021
23 °C

‘ರೈತರ ಬೆಳೆಗೆ ಉತ್ತಮ ಬೆಲೆ ಸಿಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟೂರು: ‘ಲಿಂ. ಶ್ರೀ ಸಿದ್ದಲಿಂಗ ಜಗದ್ಗುರುಗಳವರು ನಾಡಿನೆಲ್ಲೆಡೆ ಸಂಚರಿಸಿ ಧರ್ಮ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಿ, ಅನೇಕ ಪವಾಡಗಳನ್ನು ಮಾಡಿ ಪವಾಡ ಪುರುಷ ಮಹಾತಪಸ್ವಿ ಎಂದೆನಿಸಿಕೊಂಡು, ಪಂಚಪೀಠಗಳ ಶ್ರೇಯೋಭಿವೃದ್ಧಿಗೆ ಅವಿರತ ಶ್ರಮಿಸಿದವರು’ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಉಜ್ಜಿನಿಯ ಸದ್ಧರ್ಮ ಪೀಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಲಿಂಗೈಕ್ಯ ಶ್ರೀ ಸಿದ್ದಲಿಂಗ ಜಗದ್ಗುರುಗಳ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಳ್ಳಾರಿಯಲ್ಲಿರುವ ವೀರಶೈವ ವಿದ್ಯಾವರ್ಧಕ ಸಂಘವು ಇಂದು ಬೃಹದಾಕಾರವಾಗಿ ಬೆಳೆದಿದೆ ಎಂದರೆ ಲಿ. ಸಿದ್ದಲಿಂಗ ಜಗದ್ಗುರುಗಳವರ ಕೃಪಾಶೀರ್ವಾದವೇ ಕಾರಣ ಎಂದ ಅವರು, ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುವಂತಾಗಬೇಕು ಎಂದರು.

ಅಫಜಲ್‌ಪುರ ಅರುಣ್ ಕುಮಾರ್ ಪಾಟೀಲ್, ತಾಲ್ಲೂಕು ಪಂಚಾಯಿತಿ ಇಒ ಹುಲ್ಲುಮನಿ ತಿಮ್ಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಂಡ್ಲಹಳ್ಳಿ ಪರುಸಪ್ಪ. ಉಪಾಧ್ಯಕ್ಷೆ ಮಳ್ಳಕ್ಕ, ಪಿಡಿಒ ಉಮಾಪತಿ, ವೈದ್ಯಾಧಿಕಾರಿ ರವಿತೇಜು, ತಾ.ಪಂ. ಮಾಜಿ ಸದಸ್ಯ ಹೂಡೇಂ ಪಾಪನಾಯಕ, ಪೀಠದ ವ್ಯವಸ್ಥಾಪಕ ವೀರೇಶ್, ಪುರಾಣ ಪ್ರವಚನಕಾರ ಶಶಿಧರ್ ಶಾಸ್ತ್ರಿ, ಸಂಗೀತ ಕಲಾವಿದರಾದ ಜೆ. ಎಚ್. ಎಂ. ವಾಗೀಶಯ್ಯ, ಸಂತೋಷ್ ಕುಮಾರ್ ಪತ್ತಾರ್ ಇದ್ದರು. ಶಿಕ್ಷಕ ಜೋಷಿ ನಿರೂಪಿಸಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು