ಮಂಗಳವಾರ, ಮಾರ್ಚ್ 9, 2021
31 °C

ಹಂಪಿ ಪುಷ್ಕರಣಿಗೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದ ಆವರಣದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಪುಷ್ಕರಣಿ ಜೀರ್ಣೋದ್ಧಾರಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಹಂಪಿ ವೃತ್ತ ಮುಂದಾಗಿದೆ.

ಇಲಾಖೆಯ ಅಧಿಕಾರಿಗಳು ಪುಷ್ಕರಣಿಯ ಪ್ರತಿಯೊಂದು ಭಾಗದ ಅಳತೆ ಪಡೆದು, ಸ್ಥಳದಲ್ಲೇ ಅದರ ನಕಾಶೆ ಹಾಗೂ ಮಾದರಿ ಸಿದ್ಧಪಡಿಸುತ್ತಿದ್ದಾರೆ. ಅದರ ಮೂಲ ಸ್ವರೂಪದಂತೆ ಚಿತ್ರ ಬಿಡಿಸಿದ ಬಳಿಕ ಜೀರ್ಣೋದ್ಧಾರಗೊಳಿಸಲು ತೀರ್ಮಾನಿಸಲಾಗಿದೆ.

‘ಪುಷ್ಕರಣಿಗೆ ಬಳಸಿರುವ ಕಲ್ಲುಗಳು ಕೆಲವೆಡೆ ಬದಿಗೆ ಸರಿದಿವೆ. ಅವುಗಳು ಬಿದ್ದರೆ ಪುಷ್ಕರಣಿಯ ಇತರೆ ಭಾಗಕ್ಕೆ ಧಕ್ಕೆಯಾಗಬಹುದು. ಆದಕಾರಣ ಅದರ ಬಗ್ಗೆ ವಿವರವಾಗಿ ಅಧ್ಯಯನ ಮಾಡಿದ ನಂತರ  ಮೂಲ ಸ್ವರೂಪದಂತೆ ಅಭಿವೃದ್ಧಿಗೊಳಿಸಲಾಗುವುದು’ ಎಂದು ಇಲಾಖೆಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುಷ್ಕರಣಿ ಎದುರಿನ ಶಿವ ದೇಗುಲದ ಗೋಡೆಯ ಮೇಲೆ ತೆಲುಗು ಭಾಷೆಯಲ್ಲಿ ‘ಪ್ರಭಾತೀರ್ಥಂ’ ಎಂಬ ಬರಹ ಪತ್ತೆಯಾಗಿದೆ. ಸಮಗ್ರ ಅಧ್ಯಯನದ ಬಳಿಕವಷ್ಟೇ ಅದರ ಬಗ್ಗೆ ವಿವರವಾಗಿ ಗೊತ್ತಾಗಲಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು