ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ: ಚಿಣ್ಣರ ಮನಸೆಳೆದ ‘ಕಿಡ್ಸ್‌ ಜೋನ್‌’

ಮಕ್ಕಳ ಆಸಕ್ತಿ ಕೆರಳಿಸುವ, ಉತ್ಸಾಹ ಹೆಚ್ಚಿಸುವ ಸಾಧನಗಳು
Last Updated 3 ಮಾರ್ಚ್ 2019, 5:41 IST
ಅಕ್ಷರ ಗಾತ್ರ

ಹಂಪಿ: ಹಂಪಿ ಉತ್ಸವ ನಿಮಿತ್ತ ಎದುರು ಬಸವಣ್ಣ ಹತ್ತಿರ ಹೈದ್ರಾಬಾದ್‌ನ ಮೊನ್‌ಸ್ಟೆರ್‌ ಅಡ್ವೆಂಚರ್‌ ಆಯೋಜಿಸಿರುವ ಕಿಡ್ಸ್‌ ಜೋನ್‌ಗೆ ಬಿರು ಬಿಸಿಲಿನಲ್ಲಿ ಎಳೆಯರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂತು.

ಮಕ್ಕಳ ಆಸಕ್ತಿ ಕೆರಳಿಸುವ, ಉತ್ಸಾಹ ಮತ್ತು ಸಾಮರ್ಥ್ಯ ಹೆಚ್ಚಿಸುವ ವಿವಿಧ ಕಸರತ್ತುಗಳಿಗೆ ಇಲ್ಲಿ ಆಟಿಕೆಗಳನ್ನು ಅಳವಡಿಸಲಾಗಿತ್ತು. ಲ್ಯಾಂಡ್‌ ರೋಲರ್‌ ಬಾಲ್‌, ವಾಟರ್‌ ರೋಲರ್‌ ಬಾಲ್‌, ಬಾಡಿಸ್‌ ಜಾರ್ಬಿಂಗ್‌, ಟ್ಯಾಂಪೊಲಿನ್‌, ಆರ್ಚರಿ ಹಾಗೂ ರೈಫಲ್‌ ಶೂಟ್‌ ಮಕ್ಕಳ ಗಮನಸೆಳೆದವು.

ಬಿಸಿಲ ಧಗೆ ಹೆಚ್ಚಾಗಿದ್ದರಿಂದ ಬಹುತೇಕ ಮಕ್ಕಳು ವಾಟರ್‌ ರೋಲರ್‌ ಬಾಲ್‌ ಆಟಿಕೆಯಲ್ಲಿ ತಲ್ಲೀನರಾಗಿದ್ದರು. ಇನ್ನು ಕೆಲ ಮಕ್ಕಳು ಟ್ಯಾಂಪೋಲೈನ್‌ ಆಟಿಕೆಯಲ್ಲಿ ಭಾಗವಹಿಸಿ ಪುಟಿದೆದ್ದರು.

‘ಇಂಥ ಆಟಿಕೆಗಳು ನಮ್ಮ ಹಳ್ಳಿಗೂ ಬರಬೇಕು. ಕೇವಲ ದೊಡ್ಡ ಉತ್ಸವಗಳಿಗೆ ಸೀಮಿತವಾಗಬಾರದು. ಕಿಡ್ಸ್‌ ಜೋನ್‌ನಲ್ಲಿ ಎಲ್ಲ ಆಟಿಕೆಗಳಿಗೆ ₹ 50 ಕೊಡಬೇಕು. ಸಲ್ಪ ಕಡಿಮೆ ರೊಕ್ಕ ಇಟ್ಟಿದ್ದರೆ ಚೆನ್ನಾಗಿತ್ತು’ ಎಂದು ನೆಲ್ಕುದ್ರಿ ಗ್ರಾಮದ ಕೆ.ದಿಶಾ, ವಿ.ಪವಿತ್ರಾ, ಹೊಸಪೇಟೆಯ ಎಚ್‌.ಎಂ.ಅಭಿಷೇಕ, ಬಿ.ಜಿ.ಅಭಿಷೇಕ, ಸಮೃದ್ಧ ತಿಳಿಸಿದರು.

‘ಮಕ್ಕಳ ಸುರಕ್ಷತೆಗೆ ನಮ್ಮ ಸಂಸ್ಥೆ ಹೆಚ್ಚು ಆದ್ಯತೆ ನೀಡುತ್ತದೆ. ಅದಕ್ಕಾಗಿ 21 ಯುವಕರನ್ನು ನೇಮಿಸಿಕೊಂಡಿದ್ದು, ಪ್ರತಿ ಆಟಿಕೆ ವಸ್ತು ಬಳಿ ಮೂವರು ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಮೊನ್‌ಸ್ಟೆರ್‌ ಅಡ್ವೆಂಚರ್‌ ಸಿಇಒ ಅಭಿಜಿತ್‌ ನಾಯ್ಡು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT