ಭಾನುವಾರ, ನವೆಂಬರ್ 29, 2020
25 °C

ಸಚಿವ ಆನಂದ್ ಸಿಂಗ್ ಮನೆಗೆ ಪುನೀತ್‌ ರಾಜ್‌ಕುಮಾರ್ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

kannada actor puneeth rajkumar visits karnataka forest minister anand singh home

ಹೊಸಪೇಟೆ: ನಟ ಪುನೀತ್ ರಾಜಕುಮಾರ್ ಅವರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಅವರು ಮಂಗಳವಾರ ಇಲ್ಲಿ ಬೆಳ್ಳಿ ಗದೆ ನೀಡಿ ಸತ್ಕರಿಸಿದರು.

ತಾಲ್ಲೂಕಿನ ಕಮಲಾಪುರ, ಹಂಪಿ, ನೆರೆಯ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ 'ಜೇಮ್ಸ್' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಒಂದು ವಾರದಿಂದ ಪುನೀತ್ ಹಾಗೂ ಅವರ ಚಿತ್ರತಂಡ ಇಲ್ಲಿಯೇ ಬೀಡು ಬಿಟ್ಟಿದೆ.

ಮಂಗಳವಾರ ಬೆಳಿಗ್ಗೆ ಆನಂದ್ ಸಿಂಗ್ ಅವರ ಬಂಗ್ಲೆಗೆ ಬಂದಿದ್ದ ಪುನೀತ್ ಅವರನ್ನು ಸಚಿವರ ಕುಟುಂಬದವರು ಬರಮಾಡಿಕೊಂಡರು.

ಉಪಾಹಾರ ಸೇವಿಸಿ, ಕೆಲಹೊತ್ತು ಮಾತುಕತೆ ನಡೆಸಿ ಪುನೀತ್ ನಿರ್ಗಮಿಸಿದರು. ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಪ್ರಚಾರ ನಿಮಿತ್ತ ನಗರಕ್ಕೆ ಬಂದಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು