ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಗ್ರಾಮೀಣ ಬ್ಯಾಂಕ್:  50 ಸಾವಿರ ಕೋಟಿ‌ ದಾಟಿದ ವ್ಯವಹಾರ

Last Updated 20 ಜೂನ್ 2020, 9:02 IST
ಅಕ್ಷರ ಗಾತ್ರ

ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಾರ್ಚ್ ಅಂತ್ಯಕ್ಕೆ ₹ 50,220 ಕೋಟಿ ವಹಿವಾಟು ನಡೆಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಶ್ರೀನಾಥ್ ಜೋಷಿ ತಿಳಿಸಿದರು.

ನಗರದಲ್ಲಿರುವ ಬ್ಯಾಂಕಿನ ಪ್ರಧಾನ ಶಾಖೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೇಶದ 46 ಪ್ರಾದೇಶಿಕ‌ ಗ್ರಾಮೀಣ ಬ್ಯಾಂಕ್‌ಗಳ‌ ಪೈಕಿ ಈ ಸಾಧನೆ ಮಾಡಿದ ಏಕೈಕ ಬ್ಯಾಂಕ್ ಎಂಬ ಕೀರ್ತಿಯೂ ನಮ್ಮದಾಗಿದೆ ಎಂದರು.

ಬ್ಯಾಂಕ್ ₹ 28,435 ಕೋಟಿ ಠೇವಣಿ ಸಂಗ್ರಹ ಮಾಡಿದ್ದು ದೇಶದಲ್ಲಿ 2ನೇ ಸ್ಥಾನ ಪಡೆದಿದೆ. ₹21,785 ಕೋಟಿ ಸಾಲ ನೀಡಿದ್ದು, ಮೊದಲ ಸ್ಥಾನ ಪಡೆದಿದೆ ಎಂದರು.

2019-20ನೇ ಸಾಲಿನಲ್ಲಿ ಬ್ಯಾಂಕ್ 45,795 ರೈತರಿಗೆ ₹ 521 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ಸಾಲ ನೀಡಲಾಗಿದೆ. ಆದ್ಯತೆ ವಲಯದಲ್ಲಿ ₹ 19,928 ಸಾಲ‌ ನೀಡಲಾಗಿದೆ ಎಂದರು.

ಕೋವಿಡ್ ಹೋರಾಟಕ್ಕೆ ಬೆಂಬಲ ನೀಡಲು ಬ್ಯಾಂಕ್ ಸಿಬ್ಬಂದಿಯ ಒಂದು ದಿನದ ಸಂಬಳದ ಒಟ್ಟು ಮೊತ್ತ ₹ 85 ಲಕ್ಷವನ್ನು ದೇಣಿಗೆಯಾಗಿ ಪಿಎಂ ಕೇರ್ಸ್ ನಿಧಿಗೆ‌ ನೀಡಲಾಗಿದೆ‌ ಎಂದರು.

ಬಳ್ಳಾರಿ, ಕಲಬುರ್ಗಿ ಮತ್ತು‌ ಚಿತ್ರದುರ್ಗ ಜಿಲ್ಲೆಯ ಲ್ಲಿ ಬ್ಯಾಂಕ್ ಸಂಚಾರಿ ಎಟಿಎಂ ಸೌಲಭ್ಯವನ್ನು ಒದಗಿಸಲಾಗಿದೆ. ಬ್ಯಾಂಕಿನ ವ್ಯವಹಾರ ಪ್ರತಿನಿಧಿಗಳು ಕೋವಿಡ್ ಸಂದರ್ಭದಲ್ಲೂ ಮಾರ್ಚ್‌ನಿಂದ ಮೇವರೆಗೆ ಒಟ್ಟು 26 ಲಕ್ಷ ಸಂಪರ್ಕಗಳ ಮೂಲಕ ₹ 762 ಕೋಟಿ ಮೊತ್ತದ ವಹಿವಾಟು ನಡೆಸಿದ್ದಾರೆ ಎಂದು ಮಾಹಿತಿ ‌ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT