ಗುರುವಾರ , ನವೆಂಬರ್ 21, 2019
21 °C

ಹರಿಹರ-ಕೊಟ್ಟೂರು-ಹೊಸಪೇಟೆ ರೈಲು ಸಂಚಾರಕ್ಕೆ ಸಚಿವ ಸುರೇಶ ಅಂಗಡಿ ಚಾಲನೆ

Published:
Updated:

ಹೊಸಪೇಟೆ: ಹರಿಹರ-ಕೊಟ್ಟೂರು-ಹೊಸಪೇಟೆ ಪ್ರಯಾಣಿಕರ ರೈಲು ಸಂಚಾರಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಯವರು ಗುರುವಾರ ಇಲ್ಲಿ ಚಾಲನೆ ನೀಡಿದರು.

1994ರಿಂದ ಈ ಭಾಗದಲ್ಲಿ ಪ್ರಯಾಣಿಕರ ರೈಲು ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರ ಸತತ ಹೋರಾಟದ ಫಲವಾಗಿ ಇಂದು ಮುಹೂರ್ತ ಕೂಡಿ ಬಂದಿದೆ.

ಹೊಸಪೇಟೆ-ಹರಿಹರ ಮಧ್ಯೆ ರೈಲು ಸಂಚಾರ ಆರಂಭಗೊಂಡಿರುವುದರಿಂದ ಮೈಸೂರು, ಹಾಸನ, ಮಂಗಳೂರಿಗೆ ನೇರ ಸಂಪರ್ಕ ದೊರದಂತಾಗಿದೆ. ಬೆಂಗಳೂರಿಗೆ ಪ್ರಯಾಣದ ಅವಧಿ ಸಾಕಷ್ಟು ಕಡಿಮೆಯಾಗಲಿದೆ. ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಿಗೆ ರೈಲು ಸಂಪರ್ಕ ಅನುಕೂಲವಾಗಲಿದೆ.

ಸಂಸದರಾದ ಕರಡಿ ಸಂಗಣ್ಣ, ಜಿ.ಎಂ‌ಸಿದ್ದೇಶ್ವರ, ವೈ.ದೇವೇಂದ್ರಪ್ಪ, ಶಾಸಕ ಜಿ. ಸೋಮಶೇಖರ್ ರೆಡ್ಡಿ, ರೈಲ್ವೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಅಜಯ ಕುಮಾರ್ ಸಿಂಗ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರತಿಕ್ರಿಯಿಸಿ (+)