ಹೊಸಪೇಟೆ (ವಿಜಯನಗರ): ಸಿಡಿಲು ಬಡಿದ ಪರಿಣಾಮ ತಾಲ್ಲೂಕಿನ ಗುಂಡ್ಲವದ್ದಿಗೇರಿಯ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅದರಲ್ಲಿ ಸಂಗ್ರಹಿಸಿಟ್ಟಿದ್ದ ಹತ್ತು ಟನ್ ಈರುಳ್ಳಿ ಸುಟ್ಟು ಕರಕಲಾಗಿದೆ.

‘ರೈತ ಭೀಮೇಶ್ ಅವರು ಕಟಾವು ಮಾಡಿದ್ದ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸಲು ಗುಡಿಸಲಿನಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಆದರೆ, ಮಂಗಳವಾರ ಸಂಜೆ ಗುಡಿಸಲಿನ ಮೇಲೆ ಸಿಡಿಲು ಬಿದ್ದು, ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದಿದೆ. ಅದರಲ್ಲಿದ್ದ ಈರುಳ್ಳಿ ಸುಟ್ಟು ಹೋಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಹೋಗಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಅಷ್ಟೊತ್ತಿಗಾಗಲೇ ಈರುಳ್ಳಿ ಸುಟ್ಟು ಹೋಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.

ಮಳೆ:

ಎರಡು ದಿನಗಳಿಂದ ವಿಪರೀತ ಬಿಸಿಲಿನಿಂದ ದಣಿದಿದ್ದ ಜನರಿಗೆ ಮಂಗಳವಾರ ಮಳೆ ತಂಪೆರೆದಿದೆ.
ಬೆಳಿಗ್ಗೆಯಿಂದ ಕೆಂಡದಂತಹ ಬಿಸಿಲು ಇತ್ತು. ಸಂಜೆ ಏಕಾಏಕಿ ಕಾರ್ಮೋಡ ಕವಿದು ಮಳೆ ಸುರಿದಿದೆ. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲೂ ಮಳೆಯಾಗಿರುವುದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.