ಬುಧವಾರ, ಜೂನ್ 16, 2021
26 °C

ಹಂದಿ ದಾಳಿ: ರೈತನಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ಹಂದಿ ದಾಳಿಯಿಂದ ರೈತನೊಬ್ಬ ತೀವ್ರ ಗಾಯಗೊಂಡ  ಘಟನೆ ತಾಲ್ಲೂಕಿನ ಬೆಳಕೋಟಾ

ಗ್ರಾಮದಲ್ಲಿ ಸೋಮವಾರ ನಡೆದಿದೆ.

ಬಸವರಾಜ ಗುರುಲಿಂಗಪ್ಪ ಕವನಳ್ಳಿ ಗಾಯಗೊಂಡವರು. ಬೆಳಿಗ್ಗೆ ಕಬ್ಬಿಗೆ ನೀರುಣಿಸಲು ತೆರಳಿದ್ದು, ಒಳಗಿನಿಂದ ಬಂದ ಹಂದಿ ದಾಳಿ ಮಾಡಿದೆ. ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ರಕ್ತಸ್ರಾವವಾಗಿ ಬಸವರಾಜ ನಿತ್ರಾಣ ಸ್ಥಿತಿಗೆ ತಲುಪಿದ್ದರು. ಹಿಂದಿನಿಂದ ಗುದ್ದಿರುವುದರಿಂದ ಸೊಂಟಕ್ಕು ಗಾಯಗಳಾಗಿವೆ. ಕಮಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು