ಶುಕ್ರವಾರ, ನವೆಂಬರ್ 27, 2020
22 °C

ಇಸ್ಪೀಟ್ ಜೂಜಾಟ: 66 ಮಂದಿ ಬಂಧನ, ₹ 1 ಲಕ್ಷ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ಎರಡು ಪ್ರತ್ಯೇಕ ಸ್ಥಳಗಳಲ್ಲಿ ದಾಳಿ ಕಾರ್ಯಾಚರಣೆ ನಡೆಸಿದ ಕೂಡ್ಲಿಗಿ ಪೊಲೀಸರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 66 ಮಂದಿಯನ್ನು ಬಂಧಿಸಿ, ₹ 1 ಲಕ್ಷಕ್ಕೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿ ಜೂಜಾಟ ನಡೆದಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಬಳಿಕ ಕೂಡ್ಲಿಗಿ ಸಿಪಿಐ ಪಂಪನಗೌಡ ಹಾಗೂ ಪಿಎಸ್‍ಐ ತಿಮ್ಮಣ್ಣ ಎಸ್. ಚಮನೂರು ಸಿಬ್ಬಂದಿಯೊಂದಿಗೆ ದಾಳಿ ಕಾರ್ಯಾಚರಣೆ ನಡೆಸಿದರು.
ಅಲ್ಲಿ 60 ಮಂದಿಯನ್ನು ಬಂಧಿಸಿ ₹ 99,560 ವಶಪಡಿಸಿಕೊಂಡರು.

ಇನ್ನೊಂದಡೆ ಸಂಡೂರು ತಾಲ್ಲೂಕಿನ ಮಲ್ಲಾಪುರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಬಳಿ ಬಯಲಿನಲ್ಲಿ 6 ಮಂದಿಯನ್ನು ಬಂಧಿಸಿದ ಪಿಎಸ್‍ಐ ತಿಮ್ಮಣ್ಣ ಎಸ್. ಚಮನೂರು ₹ 2110 ವಶಪಡಿಸಿಕೊಂಡರು. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು