ಹೊಸಪೇಟೆ (ವಿಜಯನಗರ): ಇಲ್ಲಿನ ಪಟ್ಟಣ ಠಾಣೆ ಪೊಲೀಸರು ಎರಡೇ ದಿನಗಳಲ್ಲಿ ಮನೆ ಕಳವು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೌಲ್‌ಪೇಟೆಯಲ್ಲಿ ನಡೆದಿದ್ದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಭಾನುವಾರ ಇಬ್ಬರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಗರದ ಅಗಸರ ಓಣಿಯ ಆನಂದ ಪರಸಪ್ಪ (28), ಚಪ್ಪರದಹಳ್ಳಿಯ ಗೋವಿಂದ ಹೊನ್ನೂರಪ್ಪ (33) ನ್ಯಾಯಾಂಗ ಬಂಧನಕ್ಕೆ ಒಳಗಾದವರು. ಆರೋಪಿಗಳಿಂದ ₹28,000 ಮೌಲ್ಯದ ಬೆಳ್ಳಿ ಕಡಗ, ಚೈನು ಹಾಗೂ ಕೃತ್ಯಕ್ಕೆ ಬಳಸಿದ ರಾಡ್ ವಶಪಡಿಸಿಕೊಂಡಿದ್ದಾರೆ.

ಘಟನೆ ಹಿನ್ನೆಲೆ:

ಜು. 16ರಂದು ನಸುಕಿನ ಜಾವ ಕೌಲ್‌ಪೇಟೆಯ ಮಟನ್ ಮಾರುಕಟ್ಟೆಯಲ್ಲಿನ ದಾದಾ ಕಲಂದರ್ ಅವರ ಮನೆಯ ಬೀಗ ಮುರಿದು ಕಳವು ಮಾಡಿದ್ದರು. ಈ ಕುರಿತು ಜು. 17ರಂದು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿವೈಎಸ್ಪಿ ವಿ. ರಘುಕುಮಾರ, ಪೊಲೀಸ್ ಇನ್‌ಸ್ಪೆಕ್ಟರ್ ಎಂ. ಶ್ರೀನಿವಾಸ್ ರಾವ್, ಎಎಸ್‌ಐ ಕೋದಂಡಪಾಣಿ, ಕಾನ್‌ಸ್ಟೆಬಲ್‌ಗಳಾದ ಕೆ. ಶ್ರೀನಿವಾಸ, ಸಣ್ಣ ಗಾಳೆಪ್ಪ, ನಿಂಗರಾಜ್, ಅಡಿವೆಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.