ಪ್ರಜಾವಾಣಿ ವರದಿ ಫಲಶ್ರುತಿ: ಹಂಪಿ ಲೋಹದ ಕಮಾನು ದುರಸ್ತಿ

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿನ ತಳವಾರಘಟ್ಟ ಮಂಟಪ ಬಳಿಯ ಲೋಹದ ಕಮಾನು ದುರಸ್ತಿಗೊಳಿಸಿ, ಈ ಹಿಂದಿನಂತೆಯೇ ಅಳವಡಿಸಲಾಗಿದೆ.
‘ಅಪರಿಚಿತ ವಾಹನ ಡಿಕ್ಕಿ; ತಳವಾರಘಟ್ಟ ಮಂಟಪದ ಲೋಹದ ಕಮಾನಿಗೆ ಹಾನಿ, ಹಂಪಿಯಲ್ಲಿ ಈಗಲೂ ಭದ್ರತೆ ಮರೀಚಿಕೆ’ ಶೀರ್ಷಿಕೆ ಅಡಿ ಬುಧವಾರ (ಜು.7) ‘ಪ್ರಜಾವಾಣಿ ವರದಿ ಪ್ರಕಟಿಸಿತ್ತು.
ಭಾರಿ ವಾಹನಗಳ ಸಂಚಾರದಿಂದ ತಳವಾರಘಟ್ಟ ಮಂಟಪಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಲು ಅದರ ರಕ್ಷಣೆಗೆ ಪ್ರವೇಶ ದ್ವಾರದಲ್ಲಿ ಲೋಹದ ಕಮಾನು ಅಳವಡಿಸಲಾಗಿದೆ. ಭದ್ರತಾ ಸಿಬ್ಬಂದಿ ಕೂಡ ನಿಯೋಜಿಸಲಾಗಿದೆ. ಆದರೆ, ಇತ್ತೀಚೆಗೆ ಅಲ್ಲಿ ಯಾರೂ ಭದ್ರತೆಗೆ ಇರಲಿಲ್ಲ. ಪ್ರವಾಸಿಗರ ವಾಹನವೊಂದು ಕಮಾನಿಗೆ ಡಿಕ್ಕಿ ಹೊಡೆದಿದ್ದರಿಂದ ಅದು ನೆಲಕ್ಕುರುಳಿತ್ತು. ಈ ಕುರಿತು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಅದರಿಂದ ಎಚ್ಚೆತ್ತುಕೊಂಡ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಅದನ್ನು ಮೊದಲಿನಂತೆ ಅಳವಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.