ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.9ರಂದು ವಿಜಯನಗರ ವಸಂತ ವೈಭವ

ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ತಾಲೀಮು ಆರಂಭ
Last Updated 2 ಜನವರಿ 2020, 14:47 IST
ಅಕ್ಷರ ಗಾತ್ರ

ಹೊಸಪೇಟೆ: ‘ಹಂಪಿ ಉತ್ಸವ’ದ ಪ್ರಯುಕ್ತ ಜ. 9ರಂದು ನಗರದಲ್ಲಿ ವಿಜಯನಗರ ವಸಂತ ವೈಭವ ಕಾರ್ಯಕ್ರಮ ಜರುಗಲಿದೆ.

ಅಂದು ಸಂಜೆ 6ಗಂಟೆಗೆ ನಗರದ ವಡಕರಾಯ ದೇವಸ್ಥಾನದಿಂದ ಪ್ರಮುಖ ಬೀದಿಗಳ ಮೂಲಕ ಮುನ್ಸಿಪಲ್‌ ಮೈದಾನದ ವರೆಗೆ ಮೆರವಣಿಗೆ ನಡೆಯಲಿದೆ. ವಿಜಯನಗರ ಸಾಮ್ರಾಜ್ಯದ ವೈಭವ ಮರು ಸೃಷ್ಟಿ ಮಾಡಿ, ಮೆರವಣಿಗೆ ಮೂಲಕ ಸಾಗಲಿದೆ.

ಗುರುವಾರ ನಗರದಲ್ಲಿ ನಡೆದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌, ‘ಅಂದು ಮೆರವಣಿಗೆ ಹಾದು ಹೋಗುವ ಎಲ್ಲಾ ರಸ್ತೆಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ತಳಿರು ತೋರಣಗಳಿಂದ ಅಲಂಕರಿಸಬೇಕು. ಅಂಗಡಿ, ಮನೆ ಮಾಲೀಕರು ಅವರ ಕಟ್ಟಡಗಳ ಎದುರು ರಂಗೋಲಿ ಬಿಡಿಸಬೇಕು’ ಎಂದು ಕೋರಿದರು.

ತರಬೇತಿ ಆರಂಭ:

ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಆಯ್ಕೆಯಾದ ಕಲಾವಿದರ ತರಬೇತಿಗೆ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಪಿ. ಎನ್. ಲೋಕೇಶ್‌ ಚಾಲನೆ ನೀಡಿದರು.

ಬಳಿಕ ಮಾತನಾಡಿ, ‘ ಆಯ್ಕೆಯಾದ ಕಲಾವಿದರು ಬಹಳ ಶ್ರದ್ಧೆಯಿಂದ ತರಬೇತಿ ಪಡೆದು, ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಡಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮದ ನಿರ್ದೇಶಕ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಶಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಾಯಕ ನಿರ್ದೇಶಕ ಜಯಕುಮಾರ್, ತರಬೇತುದಾರರಾದ ಮನೋಹರ್, ಲೋಕೇಶ ಇದ್ದರು.

ಈ ತರಬೇತಿಗೆ 100 ಜನ ಕಲಾವಿದರು ಆಯ್ಕೆಯಾಗಿದ್ದು, ಅವರಿಗೆ ಜ.7ರವರೆಗೆ ತರಬೇತಿ ನೀಡಲಾಗುತ್ತಿದೆ. ಜ. 8ರಂದು ಹಂಪಿ ಗಜಶಾಲೆ ಬಳಿ ಮೊದಲ ಪ್ರದರ್ಶನ ನಡೆಯಲಿದೆ. ಜ.10ರಿಂದ 16ರವರೆಗೆ ಸಂಜೆ 7ರಿಂದ ರಾತ್ರಿ 9.15ರ ವರೆಗೆ ಕಾರ್ಯಕ್ರಮ ಜರುಗುತ್ತದೆ.

ಆಹಾರ ವ್ಯವಸ್ಥೆ ಪರಿಶೀಲನೆ:

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಡಾ.ರಾಮೇಶ್ವರಪ್ಪ ಅವರು ಗುರುವಾರ ತಾಲ್ಲೂಕಿನ ಕಮಲಾಪುರದಲ್ಲಿ ಸಭೆ ನಡೆಸಿ, ಉತ್ಸವದಲ್ಲಿ ಆಹಾರದ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.

‘ಟೋಕನ್‌ ಹೊಂದಿದ ಸಿಬ್ಬಂದಿಗೆ ಆಹಾರ ನೀಡಲಾಗುತ್ತದೆ. ಪೊಲೀಸರು ಮತ್ತು ಗೃಹರಕ್ಷಕರಿಗೆ ಕಮಲಾಪುರದ ಶಾದಿ ಮಹಲ್‌ನಲ್ಲಿ, ಕಲಾವಿದರು, ಪೌರಕಾರ್ಮಿಕರಿಗೆ ಪಾಂಡುರಂಗ ದೇವಸ್ಥಾನದಲ್ಲಿ, ಅತಿಥಿಗಳು, ಮಾಧ್ಯಮದವರಿಗೆ ಮುಖ್ಯ ವೇದಿಕೆಯ ಬಳಿ ಆಹಾರದ ವ್ಯವಸ್ಥೆ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT