ಶುಕ್ರವಾರ, ಮೇ 27, 2022
27 °C

ಹೊಸಪೇಟೆಯಲ್ಲಿ ತುಂತುರು ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯನಗರ (ಹೊಸಪೇಟೆ): ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಗುರುವಾರ ಸಂಜೆ ತುಂತುರು ಮಳೆಯಾಯಿತು.

ಕಳೆದ ಕೆಲವು ದಿನಗಳಿಂದ ಮಧ್ಯಾಹ್ನ ವಿಪರೀತ ಬಿಸಿಲು ಇರುತ್ತಿರುವುದರಿಂದ ಸೆಕೆ ಆರಂಭವಾಗಿದೆ. ಆದರೆ, ಗುರುವಾರ ದಿನವಿಡೀ ಮೋಡ ಮುಚ್ಚಿದ ವಾತಾವರಣ ಇತ್ತು. ಸೂರ್ಯ ಆಗಾಗ ಕಣ್ಣಾಮುಚ್ಚಾಲೆ ಆಡುತ್ತಿದ್ದ. ತಂಗಾಳಿ ಬೀಸಿದ್ದರಿಂದ ವಾತಾವರಣ ಸಂಪೂರ್ಣ ತಂಪಾಗಿತ್ತು. ಸಂಜೆ ವೇಳೆ ತುಂತುರು ಮಳೆಯಿಂದ ವಾತಾವರಣ ಮತ್ತಷ್ಟು ತಂಪಾಗಿತ್ತು.

ತಾಲ್ಲೂಕಿನ ಹೊಸೂರು, ಧರ್ಮದಗುಡ್ಡ, ಇಪ್ಪಿತ್ತೇರಿ ಮಾಗಾಣಿ, ಹಂಪಿ, ಕಮಲಾಪುರ, ಕಡ್ಡಿರಾಂಪುರ, ವ್ಯಾಸನಕೆರೆ ಸೇರಿದಂತೆ ಹಲವೆಡೆ ತುಂತುರು ಮಳೆಯಾಗಿರುವುದು ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.